

ಪರಶುರಾಮಪುರ: ಹೊರವಲಯದಲ್ಲಿ ಗೊಲ್ಲಾಳ್ಳೇಶ್ವರಿ ದೇವಿ ಪೂಜಾ ಮಹೋತ್ಸವ ಜರುಗಿತು.
ಹನ್ನೆರೆಡು ಕೈವಾಡಸ್ತರು ಪಿ.ಗೌರೀಪುರದ ತೋಟದ ಕಪಿಲೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ಸಂಜೆ ದೇವಿಗೆ ತಳಿಗೆ ಪೂಜೆ, ನಂತರ ಭಕ್ತರಿಂದ ಹರಕೆ ಸಮರ್ಪಣೆ, ಅನ್ನಸಂತರ್ಪಣೆ ಸೇವೆ ನಡೆಯಿತು. ರಾತ್ರಿಯಿಡೀ ದೇವಿಯ ಮೂರ್ತಿ ಹೊತ್ತ ಮೆರವಣಿಗೆ ನಡೆಸಲಾಯಿತು. ಜನಪದ ವಾದ್ಯಗಳು ಉತ್ಸವಕ್ಕೆ ಮೆರಗು ತಂದವು.
ಹರಕೆ ಹೊತ್ತ ಭಕ್ತರು ದೇವಿಗೆ ಮಂಗಳಾರತಿ ಸೇವೆ ಸಲ್ಲಿಸಿ ಧನ-ಕನಕಗಳನ್ನು ಅರ್ಪಿಸಿದರು. ಸಂಜೆ ದೇವಿಯನ್ನು ಮೂಲ ಸ್ಥಳಕ್ಕೆ ಕೊಂಡೊಯ್ಯಲಾಯಿತು.
ದೇವರಾಜು, ಪೂಜಾರಿ ಭರತ್, ಸಣ್ಣ ರಂಗಪ್ಪ, ಹನುಮಂತರಾಯ, ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ, ಚೌಳೂರು ಕರಿಯಪ್ಪ, ಪ್ರಕಾಶ, ದೊಡ್ಡೋಬಣ್ಣ, ದ್ಯಾಮಣ್ಣ, ಮೂಡಲಗಿರಿಯಪ್ಪ, ರಂಗಪ್ಪ ಮತ್ತಿತರರಿದ್ದರು.