ಮೂರು ದಿನ ಸಂಭ್ರಮದ ಉತ್ಸವ

P PURA SWAMY 15
Published on

ಪರಶುರಾಮಪುರ: ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಜ.21ರಿಂದ ಜ.23ರ ವರೆಗೆ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ ತಿಳಿಸಿದ್ದಾರೆ.

21-ಮಾರಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. 22-ಹಿಟ್ಟಿನಾರತಿ ಸೇವೆ ಇತರೆ ಧಾರ್ಮಿಕ ಕಾರ್ಯ ನಡೆಯಲಿವೆ. ಜ.23ರಂದು ಪೋತುಲರಾಜರಿಂದ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅಮ್ಮನವರ ವಿಸರ್ಜಸಿ ಗ್ರಾಮದಲ್ಲಿ ಭೂಮಿ ತಣ್ಣಗಾಗಿಸುವ ಕಾರ್ಯಕ್ರಮ ಜರುಗಲಿದೆ.

ಶಾಸಕ ಟಿ.ರಘುಮೂರ್ತಿ, ಸಂಸದ ಎ.ನಾರಾಯಣಸ್ವಾಮಿ, ಜಿಪಂ ಸದಸ್ಯ ಟಿ.ಮುತ್ತುರಾಜು, ತಾಪಂ ಸದಸ್ಯ ಕರಡಪ್ಪ ಇತರರು ಭಾಗವಹಿಸುವರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net