

ಪರಶುರಾಮಪುರ: ಲಾಕ್‌ಡೌನ್ ಸಡಿಲಿಕೆಯಾಗಿದೆ ಎಂಬ ನೆಪವೊಡ್ಡಿ ಸಾರ್ವಜನಿಕರು ಜಾಗ್ರತೆ ಮರೆಯಬಾರದು ಎಂದು ಪೊಲೀಸ್ ಠಾಣಾ ಪಿಎಸ್‌ಐ ಮಹೇಶ ಹೊಸಪೇಟೆ ತಿಳಿಸಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಎದುರು ಗುರುವಾರ ಆಯೋಜಿಸಿದ್ದ ಮಾಸ್ಕ್ ಡೇ, ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾ ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಗ್ರಾಪಂ ಸದಸ್ಯ ನರಸಿಂಹಪ್ಪ, ಎಎಸ್‌ಐಗಳಾದ ರೇವಣಸಿದ್ದಪ್ಪ, ರವೀಂದ್ರ, ನಜೀರ್ ಸಾಬ್, ಪೇದೆಗಳಾದ ಕೃಷ್ಣ, ಮಂಜುನಾಥ, ರವಿ, ಗುರುಶಾಂತ, ಗ್ರಾಮಸ್ಥರಾದ ಪ್ರದೀಪ ನಾಯಕ, ವಾಸು, ಕರಿಯಣ್ಣ, ಚಂದ್ರಣ್ಣ, ಸಂತೋಷ ಇತರರು ಉಪಸ್ಥಿತರಿದ್ದರು.