

ಪರಶುರಾಮಪುರ: ಭೂ ಮಾಲಿನ್ಯಕ್ಕೆ ಕಾರಣವಾಗುವ ಪಾಲಿಥಿನ್ ಚೀಲಗಳ ಬಳಕೆ ನಿಲ್ಲಿಸಬೇಕು ಎಂದು ಮುಖ್ಯಶಿಕ್ಷಕಿ ಐ ನುಸ್ರತ್ ಜಬೀನಾ ಹೇಳಿದರು.
ಸಮೀಪದ ಕರೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಣ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣು, ನೀರು, ಗಾಳಿ, ಆಹಾರ, ಮತ್ತಿತರೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಹೊಣೆ ಪ್ರತಿಯೊಬ್ಬರದ್ದು. ಪ್ಲಾಸ್ಟಿಕ್, ಪಾಲಿಥಿನ್, ಫೈಬರ್, ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.
ವಿಜ್ಞಾನ ಶಿಕ್ಷಕ ನಾಗರಾಜು ಮಾತನಾಡಿ, ಸರ್ಕಾರ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಶಾಲಾ ಸಮಿತಿ ಅಧ್ಯಕ್ಷ ಶಿವಣ್ಣರೆಡ್ಡಿ, ಶಿಕ್ಷಕರಾದ ಪ್ರೇಮಕುಮಾರಿ, ನಾಗರಾಜು, ಸಣ್ಣಿಂಗಮ್ಮ, ರಾಧಾ ಇದ್ದರು.