ಶಿಕ್ಷಕರಿಗೆ ಕರೊನಾ ಕುರಿತು ತರಬೇತಿ

P PURA KARONAA 19.
Published on

ಪರಶುರಾಮಪುರ: ಶಾಲಾ ಶಿಕ್ಷಕರು ಕರೊನಾ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ ಎಂದು ಚಳ್ಳಕೆರೆ ಬಿಇಒ ಕೆ.ಎಸ್.ಸುರೇಶ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಇಲಾಖೆಯ ಅನುಷ್ಠಾನಾಧಿಕಾರಿಗಳಿಗೆ ಕರೊನಾ ಕುರಿತು ಗ್ರಾಮದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಆನ್‌ಲೈನ್ ತರಗತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ತಾಲೂಕು ಶಿಕ್ಷಣ ಫೌಂಡೇಷನ್‌ನ ಸಂಯೋಜಕ ಶಿವಕುಮಾರ ಮಾತನಾಡಿ, ನೌಕರರಿಗೆ ಆನ್‌ಲೈನ್ ತರಗತಿ ಆರಂಭಿಸಿ ಉಪಯುಕ್ತ ಮಾಹಿತಿ ನೀಡಿ ಕರೊನಾ ತಡೆಗಟ್ಟಲು ಶ್ರಮಿಸುತ್ತಿದೆ ಎಂದು ತಿಳಿಸಿದರು.

ಬಿಆರ್‌ಸಿ ಮಂಜಣ್ಣ, ಬಿಆರ್‌ಪಿ ಪ್ರಸನ್ನ ಮಂಡೇಲಾ, ತಾಲೂಕು ಶಿಕ್ಷಣ ಫೌಂಡೇಷನ್‌ನ ಸಂಯೋಜಕ ಶಿವಕುಮಾರ, ಬೋರಯ್ಯ, ವೈದ್ಯರಾದ ಡಾ.ಮುತ್ತುರಾಜು, ಡಾ.ಶರ್ಮಿಳಾ, ಡಾ.ಶಮೀನಾ, ಸಿಆರ್‌ಪಿ ಶಿವಶಂಕರಪ್ಪ, ಮುಖ್ಯಶಿಕ್ಷಕರಾದ ಚಂದ್ರಣ್ಣ, ಮೂಡಲಗಿರಿಯಪ್ಪ, ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net