ಶಿರಳಗಿ ಸೊಸೈಟಿ ಅಧ್ಯಕ್ಷರಾಗಿ ಪರಶುರಾಮ ಆಯ್ಕೆ

Parasurama
Published on

ಸಿದ್ದಾಪುರ: ತಾಲೂಕಿನ ಶಿರಳಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸತತ 4ನೇ ಬಾರಿ ಪರಶುರಾಮ ಕೆರಿಯಾ ನಾಯ್ಕ ಮುಗದೂರು ಹಾಗೂ ನೂತನ ಉಪಾಧ್ಯಕ್ಷರಾಗಿ ಶ್ರೀಕಾಂತ ಎಲ್. ಭಟ್ಟ ಕೊಳಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಸಂಘದ ನೂತನ ನಿರ್ದೇಶಕರಾದ ಮಹಾಬಲೇಶ್ವರ ಟಿ.ಮಡಿವಾಳ ಮುಗದೂರು, ದಯಾನಂದ ಜಿ.ಚಲವಾದಿ ಮುಗದೂರು, ದೇವಕಿ ವಿಷ್ಣು ನಾಯ್ಕ ಮುಗದೂರು, ಮೀನಾಕ್ಷಿ ಎಸ್.ನಾಯ್ಕ ಶಿರಳಗಿ, ಗುರುವಯ್ಯ ಎಸ್.ಗೌಡ ಹಂಜಕ್ಕಿ, ದಯಾನಂದ ಕೆ.ನಾಯ್ಕ ಬಿಕ್ಕಳಸೆ, ಕೆರೆಸ್ವಾಮಿ ಎಸ್. ಮಡಿವಾಳ ಹೆರವಳ್ಳಿ, ನಾಗರಾಜ ಜಿ.ನಾಯ್ಕ ಹಂಜಕ್ಕಿ, ಧನಂಜಯ ವಿ.ನಾಯ್ಕ ಶಿರಳಗಿ ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ಬಿ.ಡಿ.ಡಿಸೋಜ ಕಾರ್ಯನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ದಯಾನಂದ ಕೆ. ತಡಗಳಲೆ ಇತರರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net