ಪರಂವಃ ಸಿನಿಮಾ ಜು.21ಕ್ಕೆ ತೆರೆಗೆ

paramvah movie
Published on

ಮೈಸೂರ: ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ ನಿರ್ಮಿಸಿರುವ ‘ಪರಂವಃ’ ಸಿನಿಮಾ ಜು.21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಪ್ರೇಮ್ ಸಿಡೇಗಲ್ ಹೇಳಿದರು.

200 ಸ್ನೇಹಿತರು ಒಟ್ಟು ಸೇರಿ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಮೈತ್ರಿ ಕಶ್ಯಪ್, ಗಣೇಶ್ ಹೆಗ್ಗೋಡು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವೀರಗಾಸೆ ಕುಟುಂಬದಿಂದ ಬಂದ ಯುವಕ ಹಾಗೂ ಆತನ ತಂದೆಯ ನಡುವಿನ ಭಾವನಾತ್ಮಕ ಪಯಣದ ಕತೆ ಇದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಸಂತೋಷ್ ಎಚ್. ಕೈದಾಳ, ಮಧುಸೂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net