ಪರಂಪರಾ ಸಂಗೀತೋತ್ಸವ

26 Dwd 1 Prof. Abdul Kareem Khan
Published on

ಧಾರವಾಡ: ಧಾರವಾಡ ಘರಾಣೆಯ ಸಿತಾರರತ್ನ ರಹಿಮತ್ ಖಾನ್‌ರ ಪುತ್ರ ಪ್ರೊ. ಅಬ್ದುಲ್ ಕರೀಮ ಖಾನ್ ಸಂಸ್ಮರಣೆಯಲ್ಲಿ ಸಿತಾರರತ್ನ ಸಮಿತಿಯು ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಏ. ೨೭ರಿಂದ ೨೯ರವರೆಗೆ ಪರಂಪರಾ ಸಂಗೀತೋತ್ಸವ ಹಮ್ಮಿಕೊಂಡಿದೆ.
೨೭ರAದು ಸಂಜೆ ೫.೩೦ಕ್ಕೆ ನಾರಾಯಣ ಹಿರೇಕೊಳಚಿ ವಯೋಲಿನ್ ಹಾಗೂ ರುದ್ರೇಶ ಭಜಂತ್ರಿ ಅವರ ಶಹನಾಯಿ ವಾದನಗಳ ಜುಗಲ್‌ಬಂದಿಯೊAದಿಗೆ ಚಾಲನೆ ದೊರೆಯಲಿದೆ. ಅವರಿಗೆ ಪ್ರಸಾದ ಮಡಿವಾಳರ ಹಾಗೂ ಚಾರುದತ್ತ ಮಹಾರಾಜ್ ತಬಲಾ ಸಾಥ್ ನೀಡುವರು. ನಂತರ ವಿನಾಯಕ ಹೆಗಡೆ ಗಾಯನಕ್ಕೆ ಉಸ್ತಾದ್ ನಿಸ್ಸಾರ ಅಹ್ಮದ್ ತಬಲಾ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡುವರು.
೨೮ರಂದು ಸಂಜೆ ೫.೩೦ಕ್ಕೆ ಪಂ. ಸುಧಾಕರ ಚವ್ಹಾಣ ಅವರ ಗಾಯನ ಮೂಡಿಬರಲಿದೆ. ಪಂ. ಕೇಶವ ಜೋಶಿ ತಬಲಾ ಹಾಗೂ ಪಂ. ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡುವರು. ೨೯ರಂದು ಧಾರವಾಡ ಘರಾಣೆಯ ಉಸ್ತಾದ್ ರಫೀಕ ಖಾನ್ ಹಾಗೂ ಉಸ್ತಾದ್ ಶಫೀಕ ಖಾನ್ ಸಹೋದರರ ಸಿತಾರ ಜುಗಲ್‌ಬಂದಿಗೆ ಯುವ ತಬಲಾ ವಾದಕ ಹೇಮಂತ ಜೋಶಿ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net