ರಾಮಕೃಷ್ಣ ಪರಮಹಂಸರ ಜಯಂತ್ಯುತ್ಸವ

Published on

ಹುಬ್ಬಳ್ಳಿ: ಇಲ್ಲಿಯ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶ್ರೀರಾಮಕೃಷ್ಣ ಪರಮಹಂಸರ 190ನೇ ಜಯಂತ್ಯುತ್ಸವವನ್ನು ಮಾರ್ಚ್ 1ರಂದು ಏರ್ಪಡಿಸಲಾಗಿದೆ.

ಬೆಳಗ್ಗೆ 9.30ಕ್ಕೆ ಪಾರಾಯಣ, ಹೋಮ, ಭಜನೆ, ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್, ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ್ ಅವರು ಸಾನ್ನಿಧ್ಯ ವಹಿಸುವರು. ಭಕ್ತರು ಪಾಲ್ಗೊಳ್ಳಬೇಕೆಂದು ಆಶ್ರಮದ ಅಧ್ಯಕ್ಷ ಸ್ವಾಮಿ ತೇಜಸಾನಂದ ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net