ರಿಯಾದ್‌ನಲ್ಲಿದ್ದ ಪಾರ್ಶ್ವವಾಯು ಪೀಡಿತ ಸುರಕ್ಷಿತವಾಗಿ ತಾಯ್ನಡಿಗೆ

help
Published on

ಬೈಂದೂರು: ರಿಯಾದ್‌ನಲ್ಲಿ ಉದ್ಯೋಗದಲ್ಲಿರುವಾಗ ಪಾಶ್ವವಾಯು ಪೀಡಿತರಾಗಿ ಅಲ್ಲಿನ ಆಸ್ಪತ್ರೆ ಸೇರಿದ್ದ ಕುಂದಾಪುರ ವ್ಯಕ್ತಿಯನ್ನು ಭಟ್ಕಳ, ಮಂಗಳೂರು, ನಮ್ಮ ಕುಂದಾಪ್ರ ಕನ್ನಡ ಹಾಗೂ ಕನ್ನಡಿಗ ಸಂಘಟನೆಗಳ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.

ಕುಂದಾಪುರ ಮೇಲ್ ಖಾರ್ವಿಕೇರಿ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ್ 30 ವರ್ಷಗಳಿಂದ ಸೌದಿಯ ರಿಯಾದ್‌ನಲ್ಲಿ ಉದ್ಯೋಗದಲ್ಲಿದ್ದರು. ಮೂರು ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಗಲ್ಫ್ ರಾಷ್ಟ್ರದಲ್ಲಿ ಅತಂತ್ರರಾಗಿದ್ದರು. ಒಂದೆಡೆ ಕರೊನಾ, ಇನ್ನೊಂದೆಡೆ ಗಲ್ಫ್ ದೇಶದ ಕಾನೂನು ಸಮಸ್ಯೆಯಿಂದ ಮನೆಯವರಿಗೆ ಹಾಗೂ ಸ್ನೇಹಿತರಿಗೆ ಆಸ್ಪತ್ರೆಯಲ್ಲಿರುವ ಇವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ವಿದೇಶದಲ್ಲಿರುವ ವಿವಿಧ ಸಂಘಟನೆಗಳ ಜತೆ ಮಾತುಕತೆ ನಡೆಸಿ ಭಟ್ಕಳ ಹಾಗೂ ಮಂಗಳೂರಿನ ತಂಡಗಳ ಶ್ರಮದಿಂದ ಮಾರ್ಚ್ 24ರಂದು ಅವರನ್ನು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.

ಶಿರೂರು ಅಸೋಸಿಯೇಷನ್ ಆಂಬುಲೆನ್ಸ್ ಮೂಲಕ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮನೆಗೆ ಕರೆತರಲಾಗಿದೆ. ವಿದೇಶದಲ್ಲಿ ಸಂಕಷ್ಟದಲ್ಲಿರುವ ಇವರ ನೆರವಿಗೆ ಸಂಘಟನೆಗಳು ಸ್ಪಂದಿಸಿ ಮಾನವೀಯ ಸಹಕಾರದ ಜತೆಗೆ ಸೌಹಾರ್ದ ಮೆರೆದಿದ್ದಾರೆೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net