ಮಾದರಿಯಾಗಿದೆ ಅನುಭವ ಮಂಟಪ ಪರಿಕಲ್ಪನೆ

10mnv01
Published on

ಮಾನ್ವಿ: ಬಸವಣ್ಣ ಅವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ಪಟ್ಟಣದ ಬಸವ ವೃತ್ತದಲ್ಲಿ ಬಸವ ಕೇಂದ್ರ ಹಾಗೂ ವೀರಶೈವ-ಲಿಂಗಾಯತ ಸಮಾಜದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬಸವಣ್ಣ ಅವರ ಸಮ ಸಮಾಜ ನಿರ್ಮಾಣ ಹಾಗೂ ಅನುಭವ ಮಂಟಪ ಪರಿಕಲ್ಪನೆ ಮಾದರಿಯಾಗಿದೆ ಎಂದರು.

ಬಸವ ಕೇಂದ್ರದಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು. ಬಸವ ಕೇಂದ್ರದ ತಾಲೂಕು ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ್, ಅಧ್ಯಕ್ಷ ಎಂ.ರಂಗಪ್ಪ, ಪ್ರಮುಖರಾದ ಡಿ.ಜಿ.ಕರ್ಕಿಹಳ್ಳಿ, ತ್ರಯಂಬಕೇಶ, ಶ್ರೀಶೈಲಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net