

ತಾಳಿಕೋಟೆ: ಧರ್ಮದೊಂದಿಗೆ ದೇಶ ಪ್ರೇಮವನ್ನು ಮಹಾರಾಣಾ ಪ್ರತಾಪಸಿಂಹ ಹೊಂದಿದ್ದರು ಎಂದು ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಮಹಾರಾಣಾ ಪ್ರತಾಪಸಿಂಹ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಭಾನುವಾರ ವೃತ್ತ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜಾ ಸಮಾರಂಭಕ್ಕೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಣಾಪ್ರತಾಪ ಅವರಲ್ಲಿ ಪರಧರ್ಮ ಸಂಹಿಷ್ಣುತೆ ಇತ್ತು. ದೇಶಕ್ಕಾಗಿ, ಧರ್ಮಕ್ಕಾಗಿ ಹೋರಾಡಿದ ಮಹನೀಯ. ಅವರಂತೆಯೇ ಧರ್ಮಕ್ಕಾಗಿ ದುಡಿಯೋಣವೆಂಬ ಭಾವನೆ ರಜಪೂತ ಸಮಾಜದವರಲ್ಲಿದೆ ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲ ಅಹ್ಮದ ಖಾಜಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ನೀಡಿದ ಸಂದೇಶಗಳಲ್ಲಿ ಯಾವುದೇ ಭೇದ ಭಾವವಿಲ್ಲ. ಅದರಂತೆ ಎಲ್ಲ ಸಮಾಜದವರು ಒಗ್ಗೂಡಿ ತಾಳಿಕೋಟೆ ಪಟ್ಟಣದ ಹೆಸರು ತರಲು ಎಲ್ಲರೂ ಶ್ರಮಿಸೋಣ ಎಂದರು.
ಕೈಲಾಸ ಪೇಠದ ಶ್ರೀ ಬಸವಪ್ರಭು ದೇವರು ಮಾತನಾಡಿ, ದೇಶಕ್ಕಾಗಿ ಹೋರಾಡಿದ ರಾಜ ಮಹಾರಾಜರ ಶೌರ್ಯ, ಪರಾಕ್ರಮ, ರಾಷ್ಟ್ರೀಯತೆ ಪ್ರತಿಕ ಮಹಾರಾಣಾ ಪ್ರತಾಪಸಿಂಹ ಎಂದರು.
ಖಾಕಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ರಜಪೂತ ಸಮಾಜದ ಯುವ ಮುಖಂಡ ವಿಜಯಸಿಂಗ್ ಹಜೇರಿ, ಶಿಕ ಅಶೋಕ ಹಂಚಲಿ ಮಾತನಾಡಿದರು.
ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಶ ವಿರಕ್ತಮಠ, ಪಿಎಸ್ಐ ರಾಮನಗೌಡ ಸಂಕನಾಳ, ರಜಪೂತ ಸಮಾಜದ ಅಧ್ಯ ಹರಿಸಿಂಗ್ ಮೂಲಿಮನಿ, ಭರತಸಿಂಗ್ ಹಜೇರಿ, ಮಾನಸಿಂಗ್ ಕೊಕಟನೂರ, ರುರಾಮಸಿಂಗ್ ಹಜೇರಿ, ಅರುಣ ದಡೇದ, ಪ್ರಕಾಶ ಹಜೇರಿ, ಬಾಬು ಹಜೇರಿ, ಅಮೀತ್ಸಿಂಗ್ ಮನಗೂಳಿ, ಸುರೇಶ ಹಜೇರಿ, ಜೈಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಬೇಕಿನಾಳ, ಗೋವಿಂದಸಿಂಗ್ ಮೂಲಿಮನಿ, ಶಿರಸಕುಮಾರಸಿಂಗ್ ಹಜೇರಿ, ರಥನಸಿಂಗ್ ಕೊಕಟನೂರ, ಸಂಜಯಸಿಂಗ್ ಹಜೇರಿ, ಸೌರಭ ವಿಜಾಪೂರ, ಪ್ರದಿಪ ವಿಜಾಪೂರ, ಕೇಸರಿಸಿಂಗ್ ಹಜೇರಿ, ಸುನೀಲ್ ಭಯಾಸ್, ದೀಲಿಪಸಿಂಗ್ ಹಜೇರಿ, ರಾಮಸಿಂಗ್ ವಿಜಾಪೂರ, ಉಮರಸಿಂಗ್ ಹಜೇರಿ ಇದ್ದರು.
ಉಮರಸಿಂಗ್ ಗೌಡಗೇರಿ ಅವರು ವಂದೇ ಮಾತರಂ ಗೀತೆ ಹಾಡಿ ಕಾರ್ಯಕ್ರಮ ಮಂಗಲಗೊಳಿಸಿದರು.