ಶಹರ ಠಾಣೆ ಮುಂದೆ ರೌಡಿಗಳ ಪರೇಡ್

h26-pared
Published on

ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಯಲ್ಲಿ ನಗರದ ಶಹರ ಪೊಲೀಸ್ ಠಾಣೆ ಆವರಣಲ್ಲಿ ಶನಿವಾರ ರೌಡಿಗಳ ಪರೇಡ್ ನಡೆಯಿತು.

30ಕ್ಕೂ ಹೆಚ್ಚು ಸಕ್ರಿಯ ರೌಡಿ ಶೀಟರ್​ಗಳನ್ನು ಪೊಲೀಸ್ ಠಾಣೆ ಆವರಣಕ್ಕೆ ಕರೆಯಿಸಿದ ಪೊಲೀಸರು, ರೌಡಿಗಳಿಂದ ಸಮಗ್ರ ಮಾಹಿತಿ ಪಡೆದರು. ಅಲ್ಲದೇ ಶಾಂತಿ, ಸುವ್ಯವಸ್ಥೆ ಕದಡದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ದುಷ್ಕೃತ್ಯಗಳು ನಡೆದರೆ ಅದಕ್ಕೆ ನೀವೇ ಜವಾಬ್ದಾರಾರು ಎಂದು ಪೊಲೀಸ್ ಇನ್​ಸ್ಪೆಕ್ಟರ್ ಮಹ್ಮದ್ ರಫೀಕ್ ತಹಸೀಲ್ದಾರ್ ಅವರು ಖಡಕ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net