ನಾಗಮಂಗಲದಲ್ಲಿ ರಾಸುಗಳ ಮೆರವಣಿಗೆ

Rasu meravanige 1
ನಾಗಮಂಗಲ ಪಟ್ಟಣದ ಜೇವರ್ಗಿ- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಸುಗಳ ಮೆರವಣಿಗೆ ನಡೆಯಿತು.
Published on

ನಾಗಮಂಗಲ: ಸಂಕ್ರಾಂತಿ ಹಬ್ಬಾಚರಣೆ ಅಂಗವಾಗಿ ಸೋಮವಾರ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದಿಂದ ಸುಮಾರು 50ಕ್ಕೂ ಹೆಚ್ಚು ಅಂಲಕೃತ ರಾಸುಗಳನ್ನು ಟಿ.ಮರಿಯಪ್ಪ ವೃತ್ತದ ಮೂಲಕ ಜೇವರ್ಗಿ- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಬಿಐ ಬ್ಯಾಂಕ್ ವೃತ್ತದವರೆಗೆ ಹಾಗೂ ಮಂಡ್ಯ ವೃತ್ತದಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಹಳ್ಳಿಕಾರ್ ಎತ್ತುಗಳು ಗಮನ ಸೆಳೆದವು. ಎತ್ತುಗಳನ್ನು ವಿವಿಧ ಬಣ್ಣಗಳಿಂದ ಹಾಗೂ ಬಣ್ಣ ಬಣ್ಣದ ಬಲೂನ್ ಗಳಿಂದ ಅಲಂಕಾರ ಮಾಡಲಾಗಿತ್ತು. ಮೆರವಣಿಗೆಯಲ್ಲಿದ್ದ ಎತ್ತುಗಳ ಮೈಮೇಲೆ ಜೈಶ್ರೀರಾಮ್, ಜೈ ಹಳ್ಳಿಕಾರ್ ಎಂದು ಬರೆಯಲಾಗಿತ್ತು. ಅಲ್ಲದೆ ಎತ್ತುಗಳ ಕೊಂಬುಗಳಿಗೆ ಕನ್ನಡದ ಬಾವುಟ ಕಟ್ಟಲಾಗಿತ್ತು. ಮಂಗಳವಾದ್ಯದೊಂದಿಗೆ ಪಟ್ಟಣದಲ್ಲಿ ಸಾಗಿದ ಮೆರವಣಿಗೆಗೆ ರಸ್ತೆ ಬದಿ ಸೇರಿದ್ದ ಸಾರ್ವಜನಿಕರು ಜೈಕಾರ ಕೂಗಿದು ಪ್ರೋತ್ಸಾಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net