ಅಬಕಾರಿ ಅಪರಾಧಗಳ ಹಳೆಯ ಆರೋಪಿಗಳ ಪರೇಡ್

22 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನವನಗರದ ಅಬಕಾರಿ ಉಪ ಆಯುಕ್ತರ ಕಚೇರಿ ಆವರಣದಲ್ಲಿ ಅಬಕಾರಿ ಇಲಾಖೆಗೆ ಸಂಬ0ಧಿಸಿ ಪ್ರಕರಣಗಳ ಹಳೆಯ ಆರೋಪಿಗಳ ಪರೇಡ್ ಬುಧವಾರ ನಡೆಸಲಾಯಿತು.

ಅಕ್ರಮ ಮದ್ಯ ಮಾರಾಟ, ನೀರು ಮಿಶ್ರಿತ ಮದ್ಯಸಾರ ಮಾರಾಟ, ಹೊರ ರಾಜ್ಯದ ಮದ್ಯ ಮಾರಾಟ, ಕಳ್ಳಭಟ್ಟಿ ಹಾಗೂ ನಕಲಿ ಮದ್ಯ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ 150 ಹಳೆಯ ಆರೋಪಿಗಳ ಚಲನವಲಯಗಳ ಮೇಲೆ ನಿಗಾ ವಹಿಸುವುದು ಮತ್ತು ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಉದ್ದೇಶದಿಂದ ಪರೇಡ್ ನಡೆಸಲಾಯಿತು.

ಆರೋಪಿಗಳು ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸ, ಹಿಂದಿನ ಕೆಲಸವನ್ನು ತೊರೆದಿರುವ ಕುರಿತು ಅಬಕಾರಿ ಉಪ ಆಯುಕ್ತ ರಮೇಶಕುಮಾರ ಎಚ್. ವಿಚಾರಣೆ ನಡೆಸಿದರು. ಮುಂದೆ ಅಕ್ರಮ ಮದ್ಯ ಮಾರಾಟ ಮಾಡದಂತೆ, ಅಬಕಾರಿ ಅಪರಾಧಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದರು.

ಜಿಲ್ಲೆಯ ಉಪ ವಿಭಾಗಗಳ ಅಬಕಾರಿ ಉಪ ಅಧೀಕ್ಷಕರು ಹಾಗೂ ನಿರೀಕ್ಷಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net