ರಣದಾಂಬಿಕೆ ದೇವಿ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ

18ALD 01
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ರಣದಾಂಬಿಕೆ ದೇವಿ ಜಾತ್ರೆ ಅಂಗವಾಗಿ ಅಡ್ಡಪಲ್ಲಕಿ ಉತ್ಸವ ಜರುಗಿತು. ಪ್ರಮುಖರಾದ ರಾಮಣ್ಣ, ಬಸವರಾಜ, ರಣದಪ್ಪ, ಹುಲಗಪ್ಪ, ಚಿರಂಜೀವಿ ಇತರರಿದ್ದರು.
Published on

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶ್ರೀ ರಣದಾಂಬಿಕೆ ದೇವಿ ಜಾತ್ರೆ ಅಂಗವಾಗಿ ಅಡ್ಡಪಲ್ಲಕ್ಕಿ ಉತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆಯಿಂದ ಶ್ರೀ ರಣದಾಂಬಿಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಹೂಗಳಿಂದ ದೇವಿಯನ್ನು ಅಲಂಕಾರಿಸಲಾಗಿತ್ತು. ನಂತರ ಅಡ್ಡಪಲ್ಲಕ್ಕಿ, ಮಹಿಳೆಯರ ಕಳಸ ಹಾಗೂ ಡೊಳ್ಳಿನ ಮೇಳದೊಂದಿಗೆ ಮೆರವಣಿಗೆ ನಡೆಯಿತು.

ಭಕ್ತರು ದೇವಿಗೆ ಪೂಜೆ ಸಲ್ಲಿಸಿ, ಉಡಿ ತುಂಬಿ ಭಕ್ತಿ ಕಾಣಿಕೆ ಸಲ್ಲಿಸಿದರು. ಪ್ರಮುಖರಾದ ರಾಮಣ್ಣ ಗಾಳೇರ, ಲಕ್ಷ್ಮಪ್ಪ, ಬಸವರಾಜ, ರಾಮಣ್ಣ, ರಣದಪ್ಪ, ಹುಲಗಪ್ಪ, ಚಿರಂಜೀವಿ, ಯಂಕಪ್ಪ, ದೇವೇಂದ್ರ, ದೇವಪ್ಪ, ಪೂಜಾರಪ್ಪ, ಈರಪ್ಪ, ಹನುಮಂತ, ಭರಮಪ್ಪ, ಮಾರುತಿ, ಸೋಮಪ್ಪ, ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net