

ಬೆಳಗಾವಿ: ಶ್ರೀಲಂಕಾದ ಕೊಲಂಬೋ ನಗರದಲ್ಲಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಪ್ಯಾರಾ ಥ್ರೋಬಾಲ್ ಚಾಂಪಿಯನ್‌ಷಿಪ್ ಜು.23ರಿಂದ 26ರ ವರೆಗೆ ಜರುಗಲಿದೆ. ಬೆಳಗಾವಿ ಜಿಲ್ಲೆಯಿಂದ ಪುರುಷರ ವಿಭಾಗದಲ್ಲಿ ಐವರು ಮತ್ತು ಮಹಿಳಾ ವಿಭಾಗದ ತಂಡದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ಯಾರಾ ಥ್ರೋಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದು, ಕ್ರೀಡಾಪಟುಗಳು ಜಯಶಾಲಿಯಾಗಲಿ ಎಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಗಣ್ಯರು ಶುಭ ಹಾರೈಸಿದರು.ಕ್ರೀಡಾಪಟುಗಳಿಗೆ ಯುವ ಜನ ಮತ್ತು ಕ್ರೀಡಾ ಇಲಾಖೆ, ಗುಜರಾತಿ ನವರಾತ್ರಿ ಉತ್ಸವ ಮಂಡಳಿ, ಸುರೇಶ್ ಯಾದವ ಫೌಂಡೇಷನ್, ಹಿಂಡಾಲ್ಕೋ ಕಂಪನಿ, ವೇಗಾ ಕಂಪನಿ ಹಾಗೂ ಡಾ.ಮಂಜುನಾಥ ಗೋರೊಸಿ, ಡಾ.ಎಂ.ವಿ.ಜಾಲಿ, ಶಿವಾನಂದ ನಿಲನ್ನವರ ಸಹಕಾರ ನೀಡಿದ್ದು, ಸಹಕಾರ ನೀಡಿದವರನ್ನೂ ಅಭಿನಂದಿಸಲಾಯಿತು. ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುಖ್ತಾರ್ ಪಠಾಣ, ಸುರೇಶ್ ಯಾದವ ಫೌಂಡೇಷನ್ ಅಧ್ಯಕ್ಷ ಸುರೇಶ ಯಾದವ, ಸಮಾಜ ಸೇವಕ ತಾಹೀರ್ ಸಯ್ಯದ್, ಪುಂಡಲೀಕ, ಹಿಂಡಾಲ್ಕೊ ಕಂಪನಿ ಅಧಿಕಾರಿ ಅಭಿಲಾಷ, ವಿ.ಎಸ್.ಪಾಟೀಲ, ಭಾರತ ಪ್ಯಾರಾ ಥ್ರೋಬಾಲ್ ತಂಡದ ನಾಯಕ ಮಹಾಂತೇಶ ಹೊಂಗಲ ಇದ್ದರು. ಆಟಗಾರರಾದ ಸೂರಜ್ ಧಾಮನೆಕರ, ಸುರೇಶ ಕುಂಬಾರ. ಮನ್ಸೂರ್ ಮುಲ್ಲಾ, ಈರಣ್ಣ ಹೊಂಡಪ್ಪನವರ, ಮನಿಷಾ ಪಾಟೀಲ, ಭಾಗ್ಯ ಮಳಲಿ ಇತರರಿದ್ದರು.