

ರಟ್ಟಿಹಳ್ಳಿ: ಪಾಪುಡಿ ಚೆಕ್ಲಿ ಮಾರಾಟ ಮಾಡುತ್ತಿದ್ದ ವಿವಿಧ ಸಂಘಗಳಲ್ಲಿ ಮಾಡಿದ ಸಾಲದ ಕುರಿತು ಚಿಂತೆ ಮಾಡುತ್ತ ಹಾಗೂ ರಕ್ತದೊತ್ತಡ ಕಡಿಮೆಯಿಂದ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಮಾಸೂರ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ಪವಳಕೊಡಿ ಕರಪ್ಪಸ್ವಾಮಿ (50) ಮೃತ ಮಹಿಳೆ.
ಇವರು ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದರು. ಪಾಪುಡಿ ಹಾಗೂ ಚೆಕ್ಲಿ ಮಾರಾಟಕ್ಕಾಗಿ ಶಿಕಾರಿಪುರ ಹಾಗೂ ಹಿರೇಕೆರೂರ ಓಡಾಡುತ್ತಿದ್ದರು. ಅಲ್ಲದೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಸಾಲದ ಕುರಿತು ಚಿಂತೆ ಮಾಡುತ್ತಿದ್ದರು. ಆದರೆ, ಮಾಸೂರ ರಸ್ತೆಯ ಜೋಳದ ಹೊಲದಲ್ಲಿ ಇವರು ಮೃತಪಟ್ಟು ಬಿದ್ದಿದ್ದಾರೆ. ಆದ್ದರಿಂದ ನನ್ನ ತಾಯಿ ಸಾವಿನಲ್ಲಿ ಸಂಶಯವಿದ್ದು ಈ ಕುರಿತು ತನಿಖೆ ಮಾಡುವಂತೆ ಮೃತಳ ಮಗ ಜಯಪಾಂಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ರಟ್ಟಿಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.