ಪಾಪು ಬಳಗದಿಂದ ನಗರದೆಲ್ಲೆಡೆ ಪ್ರಚಾರ

17 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಪಾಪು ಅಭಿಮಾನಿ ಬಳಗದ ಸದಸ್ಯರು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸಹ ತುರುಸಿನ ಪ್ರಚಾರ ನಡೆಸಿದ್ದಾರೆ.

ವಿವಿಧ ಕಡೆಗಳಲ್ಲಿ ಮತಯಾಚನೆ ನಡೆಸಿದ ಬಳಗದ ಸದಸ್ಯರು, ಕನ್ನಡ ಲೋಕದ ದಿಗ್ಗಜ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಯಾವುದೇ ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಸಂಘವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಸಂಘವನ್ನು ಮತ್ತೆ ಮುನ್ನೆಲೆಗೆ ತರುವ ಕೆಲಸ ಮಾಡಲಿದ್ದೇವೆ ಎಂಬ ಭರವಸೆಗಳೊಂದಿಗೆ ಪ್ರಚಾರ ನಡೆಸಿದರು.

ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿ ಪ್ರಕಾಶ ಉಡಿಕೇರಿ ಮಾತನಾಡಿ, ಕರ್ನಾಟಕ ವಿಶ್ವ ವಿದ್ಯಾಲಯ ಸೇರಿ ರಾಜ್ಯದ ಬಹುತೇಕ ವಿಶ್ವ ವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡದ ಕಾರಣ ಅಭಿವೃದ್ಧಿ ಕಾಣುತ್ತಿಲ್ಲ. ಹೀಗಾಗಿ ವಿಶ್ವ ವಿದ್ಯಾಲಯಗಳಿಗೆ ಬಲ ತುಂಬಲು ಅನುದಾನ ಬಿಡುಗಡೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಬಾರಿ ನಮ್ಮ ಬಳಗಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಸ್ಥಾನದ ಡಾ. ಶರಣಪ್ಪ ಕೊಟಗಿ ಮಾತನಾಡಿದರು. ಮೋಹನ ಲಿಂಬಿಕಾಯಿ, ಡಾ. ರತ್ನಾ ಐರಸಂಗ, ಮಾರ್ತಾಂಡಪ್ಪ ಕತ್ತಿ, ವೀರಣ್ಣ ಯಳಲ್ಲಿ, ಪ್ರಭು ಹಂಚಿನಾಳ, ವಿಶ್ವನಾಥ ಅಮರಶೆಟ್ಟಿ, ಪ್ರಭು ಕುಂದರಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net