ಪೇಪರ್ ಸೀಡ್ ಬಾವುಟ ವಿತರಣೆ; ಇದು ಪರಿಸರ ಸ್ನೇಹಿ ಸ್ವಾತಂತ್ರೋತ್ಸವ!

Flag
Published on

ಬೆಂಗಳೂರು: ಯುವಧ್ವನಿ ಡಿಬೇಟ್ ಕ್ಲಬ್ ಮತ್ತು ಸ್ಫೂರ್ತಿ ಯುವಕವಿ ಬಳಗ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಗಿಡಗಳ ಬೀಜವಿರುವ 1500 ಕಾಗದದ ಬಾವುಟವನ್ನು (Paper seed flag) ಹಂಚಿದೆ.

ನಗರದ ವಿವಿಧೆಡೆ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಪೇಪರ್ ಸೀಡ್ ಬಾವುಟಗಳನ್ನು ವಿತರಿಸಿ, ಪ್ಲಾಸ್ಟಿಕ್ ಬಾವುಟ ಬಳಸಬಾರದು ಎಂದು ಅರಿವು ಮೂಡಿಸಲಾಗಿದೆ. ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ತೆರಳಿ ಮತ್ತು ವಿಧಾನಸೌಧ, ಲಾಲ್​ಬಾಗ್ ಬಳಿ ವಿತರಿಸಲಾಗಿದೆ.

ಪ್ಲಾಸ್ಟಿಕ್ ಬಾವುಟ ಪರಿಸರದ ಮೇಲೆ ಬೀರುವ ನಕಾರಾತ್ಮಕ ಪ್ರಭಾವ ಮತ್ತು ಎಲ್ಲೆಂದರಲ್ಲಿ ಎಸೆದು ದೇಶದ ಹೆಮ್ಮೆಯ ಭಾವುಟಕ್ಕೆ ಅಗೌರವ ತೋರುತ್ತಿರುವುದಕ್ಕೆ ಕಡಿವಾಣ ಹಾಕಲು ಎರಡು ತಂಡಗಳು ಈ ಒಂದು ಪ್ರಯತ್ನ ಮಾಡಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net