ಪತ್ರಿಕಾ ವಿತರಕರ ದಿನಾಚರಣೆ

4 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಬುಧವಾರ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು. ವಿವಿಧ ಪತ್ರಿಕೆಗಳ ಏಜೆಂಟರು, ವಿತರಕರು ಹಾಗೂ ಪತ್ರಿಕೆ ಹಂಚುವ ಹುಡುಗರು ಕೇಕ್ ಕತ್ತರಿಸಿ ಪತ್ರಿಕಾ ವಿತರಕರ ದಿನ ಆಚರಿಸಿದರು.
ಹಿರಿಯ ವಿತರಕ ವೀರಭದ್ರಯ್ಯ ಹಿರೇಮಠ ಮಾತನಾಡಿ, ಎಲ್ಲಿಯೂ ಸಲ್ಲದವರು ಪತ್ರಿಕೆ ಹಂಚುವ ವೃತ್ತಿಯಲ್ಲಿ ಸಲ್ಲುತ್ತಾರೆ. ಯುವಕರು ಈ ವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಬೇಕು ಎಂದರು.
ವಿತರಕ ಸುರೇಶ ಸುಣಗಾರ ಮಾತನಾಡಿ, ಪತ್ರಿಕಾ ವಿತರಕರಿಗೂ ಒಂದು ದಿನ ಇರುವುದು ಹೆಮ್ಮೆಯ ವಿಷಯ. ಮುದ್ರಣ ಮಾಧ್ಯಮ ಜಗತ್ತಿನಾದ್ಯಂತ ಅಸ್ತಿತ್ವದಲ್ಲಿರುವ ಅತಿ ದೊಡ್ಡ ಕ್ಷೇತ್ರ. ಪತ್ರಿಕಾ ಕ್ಷೇತ್ರ ಅಭಿವೃದ್ಧಿಯಾದಂತೆ ವಿತರಕರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಸಾರ್ವಜನಿಕರು ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಸಲು ಓದುಗರ ಅಭಿಯಾನ ಮಾಡುವ ಉದ್ದೇಶವಿದೆ ಎಂದರು.
ಶಿವು ಹಲಗಿ, ಕೃಷ್ಣಾ ಕುಲಕರ್ಣಿ, ಶಶಿಕಾಂತ ನೀಲಾಕಾರಿ, ಕೆ.ಎನ್. ಹೊಂಗಲ್, ಗೌಸಮೊಯಿದ್ದೀನ್ ಬದಾಮಿ, ಚಂದ್ರಶೇಖರ ಬೇಲೂರ, ಬಸವರಾಜ ಗೊಂದಿ, ವೆಂಕಟೇಶ ಮೊದಲಿಯಾರ್, ರವಿ ಮಲ್ಲಿಗವಾಡ, ಮಂಜು ಹಿರೇಮಠ, ರಾಜು ಮಂಟೇದ, ಮನೋಹರ ಮಠಪತಿ, ಶಿವಾನಂದ ಕುರಹಟ್ಟಿ, ಸಂತೋಷ ರೋಖಡೆ, ಅಸ್ಲಂ, ರಾಜು, ಪ್ರಕಾಶ, ದೀಪಕ, ಜೀಶಾನ್, ಪ್ರಭು, ಸಚಿನ್ ಜತ್ತಿ, ಅರ್ಜುನ, ಕೃಷ್ಣಮೂರ್ತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net