ಪಪಂ ಸದಸ್ಯ ಪತ್ತೆಯಾಗದಿರುವುದು ವೈಫಲ್ಯ

1Kittur2
ನಾಗರಾಜ ಅಸುಂಡಿ ಅವರ ಅಪಹರಣಕ್ಕೆ ಬಳಸಿರುವ ಕಾರು ದೊಡ್ಡಬಳ್ಳಾಪುರ ರೆಸಾರ್ಟ್‌ನಲ್ಲಿರುವುದು.
Published on

ಚನ್ನಮ್ಮನ ಕಿತ್ತೂರು: ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಹಾಗೂ ಅವರನ್ನು ಅಪಹರಣ ಮಾಡಿರುವವರು ಬೆಂಗಳೂರಿನ ದೊಡ್ಡಬಳ್ಳಾಪುರ ರೆಸಾರ್ಟ್ ನಲ್ಲಿದ್ದು, ಕೃತ್ಯಕ್ಕೆ ಬಳಸಿದ ಕಾರು ಅಲ್ಲೇ ಸಿಕ್ಕಿದೆ ಎಂದು ಬಿಜೆಪಿ ಕಾರ್ಯಕರ್ತರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಇದುವರೆಗೂ ನಾಗರಾಜ ಹಾಗೂ ಅಪಹರಣ ಮಾಡಿದ ವ್ಯಕ್ತಿಗಳು ಪತ್ತೆಯಾಗದಿರುವುದು ವಿಚಿತ್ರ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸದಸ್ಯ ಅದೇ ಸ್ಥಳದಲ್ಲಿ ಇರುವುದ ಸಹ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೂ ಆತ ಪತ್ತೆಯಾಗದಿರುವುದು ಪೊಲೀಸರ ವೈಫಲ್ಯ ಎತ್ತಿ ತೋರುತ್ತಿದೆ ಎಂದರು. ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ, ನಾಗರಾಜ ಕುಟುಂಬ ಆತಂಕದಲ್ಲಿದೆ.ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮುಂದೂಡಲು ಮನವಿ ಸಲ್ಲಿಸಿದರೂ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು. ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿ, ಪಪಂ ಸದಸ್ಯನನ್ನು ಹುಡಕಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಶ್ರೀಕರ್ ಕುಲಕರ್ಣಿ, ನಿಂಗನಗೌಡ ದೊಡ್ಡಗೌಡರ, ಸಕ್ಕರಗೌಡ ಪಾಟೀಲ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ರವಿರಾಜ ಇನಾಮದಾರ, ಸುರೇಶ ಪತ್ತಾರ, ಶಿವಾನಂದ ಹನಮಸಾಗರ, ಬಸವರಾಜ ಮಾತನವರ, ಮಂಜುನಾಥ ದೊಡಮನಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net