ಮಣಿಪುರ ಘಟನೆ ಖಂಡಿಸಿ ಪಂಜಿನ ಮೆರವಣಿಗೆ

mkg
Published on

ನ್ಯಾಮತಿ: ಮಣಿಪುರದಲ್ಲಿ ನಡೆದ ಘಟನೆ ಖಂಡಿಸಿ ತಾಲೂಕು ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಈಚೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.

ಸುರಹೊನ್ನೆ ವೃತ್ತದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವರೆಗೂ ಪಂಜಿನ ಮೆರವಣಿಗೆ ನಡೆಸಿ, ಗ್ರಾಮ ಲೆಕ್ಕಿಗ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆ ಮುಖಂಡರು ಮಾತನಾಡಿ, ಮಣಿಪುರದಲ್ಲಿ ದಿನದಿಂದ ದಿನಕ್ಕೆ ಜನಾಂಗೀಯ ಘರ್ಷಣೆ ಹೆಚ್ಚಾಗುತ್ತಿದ್ದು, ಮಹಿಳೆಯರು, ಮಕ್ಕಳು ಬಲಿಯಾಗುತ್ತಿದ್ದಾರೆ. ಆದ್ದರಿಂದ ಹಿಂಸಾಚಾರ ತಡೆಯುವಲ್ಲಿ ವಿಫಲವಾದ ಮಣಿಪುರ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ಒತ್ತಾಯಿಸಿದರು.

ಶಿವಮೊಗ್ಗ, ಗುಲ್ಬರ್ಗಾದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ, ಧರ್ಮಸ್ಥಳ ಸೌಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ.ಡಿ. ಈಶ್ವರಪ್ಪ, ಅರಕೆರೆ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಸುನಿಲ್ ಎಚ್., ಉಪಾಧ್ಯಕ್ಷ ಜಗದೀಶ ಬಿ., ಅಣ್ಣಪ್ಪ, ಪರಮೇಶ್ ನಾಯ್ಕ, ಮಾಲತೇಶಪ್ಪ, ಗುಡದಯ್ಯ, ಅನಿತಾ, ಕವಿತಾ, ಮಾಚಿನಹಳ್ಳಿ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net