ಪಂಜಿಮೊಗರು ನಿವಾಸಿ ದುಬೈನಲ್ಲಿ ಹೃದಯಾಘಾತದಿಂದ ನಿಧನ

mng--26 Oct Akthar
Published on

ಮಂಗಳೂರು: ಕೂಳೂರು ಪಂಜಿಮೊಗರು ವಿದ್ಯಾನಗರ ನಿವಾಸಿ ಅಕ್ತರ್ (27) ಅವರು ದುಬೈಯ ಸಲಾವುದ್ದೀನ್ ಎಂಬಲ್ಲಿ ಹೃದಯಾಘಾತದಿಂದ ನಿಧರಾಗಿದ್ದಾರೆ.


ಪಂಜಿಮೊಗರು ಮುಹಮ್ಮದ್ ಮತ್ತು ಮರಿಯಮ್ಮ ದಂಪತಿಯ ಪುತ್ರರಾಗಿರುವ ಅಕ್ತರ್ ಅವರು ಕಳೆದ 7 ತಿಂಗಳಿನಿಂದ ದುಬಾಯಿಯಲ್ಲಿ ಕೆಲಸದಲ್ಲಿದ್ದರು. ಕರ್ತವ್ಯ ಮುಗಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಏಳದೇ ಇದ್ದಾಗ ಸಂಗಡಿಗರು ಪರಿಶೀಲಿಸಿದಾದ ಅವರು ನಿಧನರಾದ ವಿಷಯ ಗಮನಕ್ಕೆ ಬಂದಿದೆ.


ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಕೆಸಿಎಫ್ ಸಂಘಟನೆಯ ಪದಾಧಿಕಾರಿಗಳು, ಸೌದಿಯಲ್ಲಿರುವ ಮೃತರ ಸಹೋದರ ಇರ್ಫಾನ್ ಅವರು ಸ್ಥಳಕ್ಕೆ ಆಗಮಿಸಿದ್ದು ಕ್ರಮ ಕೈಗೊಂಡಿದ್ದಾರೆ. ಗುರುವಾರ ರಾತ್ರಿ ಹೊರಟು ಶುಕ್ರವಾರ ದೇಹ ಮಂಗಳೂರು ತಲುಪಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net