

ಶಿರ್ವ: ಪಂಜಿಮಾರು ಪಲ್ಕೆ ಶ್ರೀವ್ಯಾಘ್ರ ಚಾಮುಂಡೇಶ್ವರಿ ದೇವಳದ 15ನೇ ಪ್ರತಿಷ್ಠಾಪನಾ ವರ್ಧಂತಿ ಗುರುವಾರ ನಾಗರಾಜ ಭಟ್ ಮುಲ್ಕಾಡಿ ನೇತೃತ್ವದಲ್ಲಿ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಅನುಷ್ಠಾನಗಳು, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ಸಾನ್ನಿಧ್ಯದಲ್ಲಿ ದೇವಿಯ ದರ್ಶನ ಸೇವೆ ನಂತರ ಅನ್ನಸಂತರ್ಪಣೆ ನಡೆಯಿತು. ಮಾನೆಟ್ಕ ಕುಟುಂಬಸ್ಥರು, ರತ್ನಾಕರ ಆಳ್ವ, ಮಹಾವೀರ ಪಡಿವಾಳ ದಂಪತಿ ತೀರ್ಥಹಳ್ಳಿ, ಶಂಕರ ಆಚಾರ್ಯ ಪಲ್ಕೆ, ಸ್ಥಳದಾನಿ ವಿನ್ಸೆಂಟ್ ಪಲ್ಕೆ, ಪ್ರಸನ್ನ ಶೆಟ್ಟಿ ದೊಡ್ಡಮನೆ, ಡಾ.ವಿಟ್ಠಲ್ ನಾಯಕ್, ಬಿ.ಪುಂಡಲೀಕ ಮರಾಠೆ, ಸ್ಥಳವಂದಿಗರು, ಗ್ರಾಮಸ್ಥರು ಉಪಸ್ಥಿತರಿದ್ದರು.