ದೇವರ ಆರಾಧನೆಯೊಂದಿಗೆ ಸಹಾಯಹಸ್ತ - ಶಶಿಕುಮಾರ್ ಬಾಲ್ಯೊಟ್ಟು ಶ್ಲಾಘನೆ - ಪಂಜಿಗುಡ್ಡೆಯಲ್ಲಿ ೧೭ನೇ ವರ್ಷದ ಗಣೇಶೋತ್ಸವ

PTR_29 AUG_3
Published on

ಪುತ್ತೂರು: ಗಣೇಶೋತ್ಸವದಲ್ಲಿ ದೇವರನ್ನು ಪ್ರಾರ್ಥಿಸುವ ಜತೆಗೆ ಸಮಾಜದ ಹಿರಿಯರನ್ನು ಗೌರವಿಸುವ, ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ಚಾಚುವ ಕಾರ್ಯವಾಗಿದೆ. ಈ ಮೂಲಕ ಸಂಪಾದನೆಯ ಒಂದು ಅಂಶವನ್ನು ಸಮಾಜಕ್ಕೆ ಸಮರ್ಪಿಸುವ ಕೆಲಸವಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಶ್ಲಾಸಿದರು.

ಪಡ್ನೂರು ಪಂಜಿಗುಡ್ಡೆಯಲ್ಲಿ ೧೭ನೇ ವರ್ಷದ ಗಣೇಶೋತ್ಸವದಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಿ ಮಾತನಾಡಿದರು.

ವಕೀಲ ಸುಬ್ರಹ್ಮಣ್ಯ ಕೊಳತ್ತಾಯ ಅವರನ್ನು ಸನ್ಮಾನಿಸಲಾಯಿತು. ಜಯಂತ, ಜಮೀಲಾ ಯರ್ಮುಂಜ, ಗಣೇಶ್, ಹೊನ್ನಮ್ಮ, ನೋಣಮ್ಮ, ರೇವತಿ, ಕಮಲ ಭಂಡಾರಿ, ಸುಮಿತ್ರಾ ಶೇವಿರೆ, ಶೋಭಾ ರಕ್ತೇಶ್ವರಿ ವಠಾರ, ಭಾಗಿ, ಧನ್ಯಶ್ರೀ, ಅಜ್ಜು, ನಾರಾಯಣ ಸ-ಲ್ಯ, ಲಲಿತಾ, ನೆಬಿಸಾ ಅವರಿಗೆ ನೆರವು ನೀಡಲಾಯಿತು.

೧೭ನೇ ವರ್ಷದ ಗಣಪತಿಯನ್ನು ವರಣ್ ಆರಾಧಿಸಿದರು. ನವರಾಜ್ ಭಟ್ ಅಮೈ, ಹರಿಪ್ರಸಾದ್ ಮುರ ವೇದ ಘೋಷ ನಡೆಸಿದರು. ವಕೀಲ ಮಹೇಶ್ ಕಜೆ ಸನ್ಮಾನ ಪತ್ರ ವಾಚಿಸಿದರು.

ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಕೀಲ ಗಿರೀಶ್ ಮಳಿ, ಪುತ್ತೂರು ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಜಯಶ್ರೀ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ನಳಿನಿ ಪಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net