ಹೋರಾಟಗಾರರಿಂದ ಪಂಜಿನ ಮೆರವಣಿಗೆ

ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧಿನ ವಿರೋಧಿಸಿ ಹೋರಾಟಗಾರರು ಪಂಜಿನ ಮೆರವಣಿಗೆ ನಡೆಸಿದರು. ರೈತ ಹೋರಾಟಗಾರ ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮಣಪ್ಪ, ಮೋಹನ್​ ಕುಮಾರ್​, ಸಿ.ಕೆ.ರಾಮಚಂದ್ರಪ್ಪ, ಮುಕುಂದ್​, ಲಕ್ಷ್ಮಮ, ವೆಂಕಟೇಶ್​, ನಲ್ಲೂರು ಗೋಪಿನಾಥ್​ ಮತ್ತಿತರರಿದ್ದರು
ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧಿನ ವಿರೋಧಿಸಿ ಹೋರಾಟಗಾರರು ಪಂಜಿನ ಮೆರವಣಿಗೆ ನಡೆಸಿದರು. ರೈತ ಹೋರಾಟಗಾರ ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮಣಪ್ಪ, ಮೋಹನ್​ ಕುಮಾರ್​, ಸಿ.ಕೆ.ರಾಮಚಂದ್ರಪ್ಪ, ಮುಕುಂದ್​, ಲಕ್ಷ್ಮಮ, ವೆಂಕಟೇಶ್​, ನಲ್ಲೂರು ಗೋಪಿನಾಥ್​ ಮತ್ತಿತರರಿದ್ದರು
Published on

ಭೂ ಸ್ವಾಧಿನ ವಿರೋಧಿಸಿ ಪ್ರತಿಭಟನೆ, ಸ್ವಾಧಿನ ಕೈಬಿಡುವಂತೆ ಆಗ್ರಹ

ಚನ್ನರಾಯಪಟ್ಟಣ:ಹೋಬಳಿಯ 13 ಗ್ರಾಮಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧಿನ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಹೋರಾಟಗಾರರು ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು. 858 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಹ್ಯಾಡಾಳ ಮತ್ತು ಗೋಖರೆ, ಬಚ್ಚಹಳ್ಳಿ ಗ್ರಾಮದ ಕೃಷಿ ಭೂಮಿಯನ್ನು ನೋಟಿಫಿಕೇಷನ್​ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದರು. ಸುಧೀರ್ಘ ಹೋರಾಟದ ಬಗ್ಗೆ ಗಮನ ನೀಡದ ಸರ್ಕಾರದ ನೀತಿಯಿಂದ ರೈತರ ತಾಳ್ಮೆಯ ಕಟ್ಟೆಯೊಡೆದರೆ ಮುಂದೆ ಏನಾಗುತ್ತದೆ ಎಂಬುದನ್ನು ತೋರಿಸುತ್ತೇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತು ಸ್ವಾಧಿನಗೊಂಡಿರುವ ಭೂಮಿಯನ್ನು ಕೈಬಿಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಸರ್ಕಾರ ಬದಲಿಸುವ ಶಕ್ತಿ ಇದೆ: ಎಲ್ಲೆಲ್ಲಿ ಹೋರಾಟಗಳು ಬಲಿಷ್ಠವಾಗಿವೆಯೋ ಅಲ್ಲೆಲ್ಲ ಜಯಸಿಕ್ಕಿದೆ. ರೈತರ ಹೋರಾಟದಲ್ಲಿ ಶಕ್ತಿಯಿದೆ. ರೈತ ವಿರೋಧಿ ನೀತಿಗಳನ್ನು ಅನುಸರಿಸುವ ಯಾವುದೇ ಸರ್ಕಾರಗಳನ್ನು ಬದಲಾಯಿಸುವ ಶಕ್ತಿ ಹೋರಾಟಗಳಿಗೆ ಇದೆ ಎಂದು ಹೋರಾಟ ಸಮಿತಿ ನಲ್ಲಪ್ಪನಹಳ್ಳಿ ನಂಜಪ್ಪ ಹೇಳಿದರು. ಸರ್ಕಾರ, ಭೂಸ್ವಾಧಿನ ಪ್ರಕ್ರಿಯೆ ಆದೇಶ ಹಿಂಪಡೆಯಲೇಬೇಕು. ಕೃಷಿ ಜಮೀನುಗಳು ರೈತರಿಂದ ಕಿತ್ತುಕೊಂಡು ಕಾಪೋರ್ರೇಟ್​ ಕಂಪನಿಗಳಿಗೆ ಮತ್ತು ದಲ್ಲಾಳಿಗಳಿಗೆ ಕೊಡುವುದಕ್ಕೆ ಬಿಡಬಾರದು. ಭೂಮಿ ಮಾರಾಟಕ್ಕಿದೆ ಎಂದರೆ ರಾತ್ರಿಯಲ್ಲೂ ನೋಂದಣಿ ಮಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ಕೊಟ್ಟಿದ್ದೇವೆ ಎಂದರು. ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್​ ಮಾತನಾಡಿ, ದೇಶದಲ್ಲಿ ಏನಾದರೂ ಪಡೆದುಕೊಳ್ಳಬೇಕಾದರೆ, ಹೋರಾಟದ ಮೂಲಕವೇ ಪಡೆಯಬೇಕು. ಬ್ರಿಟಿಷರು ಮಾಡಿರುವ ಕಾನೂನುಗಳನ್ನೇ ಅನುಸರಿಸುತ್ತಿದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸುವಂತಾದರೆ ಹೋರಾಟಕ್ಕೆ ಖಂಡಿತ ಯಶಸ್ಸು ಸಿಗುತ್ತದೆ ಎಂದರು.


ದೇಶದಲ್ಲಿ ನ್ಯಾಯ ಪಡೆಯಬೇಕಾದರೆ, ಹೋರಾಟಗಳ ಮೂಲಕವೇ ಸಾಧ್ಯವಾಗುತ್ತದೆ. ಯಾವುದೇ ಸರ್ಕಾರಗಳು ರೈತರ ತಂಟೆಗೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ. ಹೂ, ಹಣ್ಣು, ತರಕಾರಿಗಳನ್ನು ಬೆಳೆಯುವ ಭೂಮಿಗಳನ್ನು ಕಾಪೋರ್ರೇಟ್​ ಕಂಪನಿಗಳಿಗೆ ಕೊಡಲು ಬಿಡುವುದಿಲ್ಲ ಎಂದು ರೈತಪರ ಹೋರಾಟಗಾರ ಚಿಮಾಚನಹಳ್ಳಿ ಮುಕುಂದ ಪ್ರತಿಕ್ರಿಯಿಸಿದರು.


ಬೆಳೆಯುವ ರೈತನ ಕೈಯಲ್ಲಿ ಭೂಮಿ ಇರಲಿ: ಸರ್ಕಾರಗಳು ರೈತರ ತಾಳ್ಮೆ ಪರೀೆ ಮಾಡುತ್ತಿವೆ. ಸ್ವಾತಂತ್ರ$್ಯ ಪಡೆದು 75 ವರ್ಷ ಕಳೆದರೂ ರೈತರನ್ನು ಅರ್ಥ ಮಾಡಿಕೊಳ್ಳುವಂತಹ ಸರ್ಕಾರಗಳು ಬರಲಿಲ್ಲ. ಭೂಮಿ ಎನ್ನುವುದು ಬೆಳೆ ಬೆಳೆಯುವ ರೈತನ ಕೈಯಲ್ಲಿರಬೇಕೇ ಹೊರತು, ಕಾರ್ಖಾನೆಗಳ ಮಾಲೀಕರ ಕೈಯಲ್ಲಿ ಅಲ್ಲ. ಸರ್ಕಾರಕ್ಕೆ ಬದ್ಧತೆಯಿದ್ದರೆ, ರೈತರ ಭೂಮಿಯನ್ನು ಕೈಬಿಟ್ಟು, ಬರಡು ಭೂಮಿಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿಕೊಳ್ಳಲಿ, ನಾವು ನಿರಂತರವಾಗಿ ರೈತರ ಹೋರಾಟದ ಒಂದು ಭಾಗವಾಗುತ್ತೇವೆ ಎಂದು ಹೋರಾಟ ಸಮಿತಿ ಸದಸ್ಯ ನಲ್ಲೂರು ಗೋಪಿನಾಥ್​ ಆಗ್ರಹಿಸಿದರು.
ಸುಡಲಿದೆ ಬೆಂಕಿ!: ಸರ್ಕಾರಗಳ ಮಾತು ಕೇಳಿಕೊಂಡು ಕಾಪೋರ್ರೇಟ್​ ಕಂಪನಿಗಳು ಫಲವತ್ತಾದ ಕೃಷಿ ಭೂಮಿಯನ್ನು ಹಾಳು ಮಾಡಿ, ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾದರೆ ಅನ್ನದಾತರು ಇಂದು ಹಚ್ಚಿರುವ ಬೆಂಕಿಯಲ್ಲಿ ಸುಟ್ಟು ಹೋಗಬೇಕಾಗುತ್ತದೆ ಎಂದು ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಮಾರೇಗೌಡ ಎಚ್ಚರಿಕೆ ನೀಡಿದರು. ಸ್ವಾತಂತ್ರ$್ಯ ಸಂಗ್ರಾಮದ ವೇಳೆ ನಡೆದ ಕ್ವಿಟ್​ ಇಂಡಿಯಾ ಚಳವಳಿಯೇ ಈ ಮೆರವಣಿಗೆಗೆ ಸ್ಫೂರ್ತಿಯಾಗಿದ್ದು, ಅನ್ನ ನೀಡುವ ಭೂಮಿಯನ್ನು ಕಸಿಯಲು ಬಂದವರು ಇದೇ ಭೂಮಿಯ ಒಡಲನ್ನು ಸೇರಬೇಕಾಗುತ್ತದೆ ಎಂದು ಗರ್ಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net