ಜಮೀನೊಂದರಲ್ಲಿ ಚಿಪ್ಪುಹಂದಿ ರಕ್ಷಣೆ

20 HANUR 2
ಹನೂರಿನ ಜಮೀನೊಂದರಲ್ಲಿ ಕಾಣಿಸಿಕೊಂಡ ಚಿಪ್ಪು ಹಂದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಿಡಿದು ಕಾಡಿಗೆ ಬಿಟ್ಟರು.
Published on

ಹನೂರು: ಪಟ್ಟಣದ ಜಮೀನೊಂದರಲ್ಲಿ ಶನಿವಾರ ಕಾಣಿಸಿಕೊಂಡ ಚಿಪ್ಪು ಹಂದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು. ಪಟ್ಟಣದ ಗೋವಿಂದರಾಜು ನಾಯ್ಡು ಅವರ ಜಮೀನಿನಲ್ಲಿ ಬೆಳಗ್ಗೆ 8.30ರ ವೇಳೆಯಲ್ಲಿ ಕೂಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಸಂಗ್ರಹಿಸಿದ್ದ ಒಣಗಿದ ತೆಂಗಿನ ಮಟ್ಟೆಯಡಿ ಚಿಪ್ಪು ಹಂದಿ ಅಡಗಿ ಕುಳಿತಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು. ಆರ್‌ಎಫ್‌ಒ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಚಿಪ್ಪುಹಂದಿಯನ್ನು ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net