ಬಳ್ಳಾರಿ ; ಇಲ್ಲಿನ ರಾಬಕೊವಿ (ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ)ಹಾಲು ಒಕ್ಕೂಟದಲ್ಲಿ ಪನೀರ್ ಉತ್ಪಾದನೆ ಘಟಕ ಸೇರಿದಂತೆ ಹಾಗೂ ಗುಣಮಟ್ಟದ ಹಾಲಿನ ಉತ್ಪನ್ನ ತಯಾರಿಸಿ ನೀಡಲು ಮುಂದಾಗಲಿದೆ.
ಸದ್ಯ ಒಕ್ಕೂಟದಲ್ಲಿ ವಿವಿಧ ರೀತಿಯ ಹಾಲು, ಮೊಸರು, ತುಪ್ಪ, ಬೆಣ್ಣೆ, ಸುವಾಸನೆಯ ಹಾಲು, ತ್ವರಿತ ಮಿಶ್ರಣ, ಹಾಲಿನ ಪುಡಿ, ಮತ್ತು ಸಿಹಿತಿಂಡಿಗಳು ಸೇರಿದಂತೆ ನಾನಾ ರೀತಿಯ ಹಾಲಿನ ಉತ್ಪನಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಹದಿನಾಲ್ಕು ಹಾಲು ಒಕ್ಕೂಟಗಳಲ್ಲಿ ಈಗಾಗಲೇ ಕೆಲ ಕಡೆ ಪನೀರ್ ಉತ್ಪಾದನೆ ಘಟಕಗಳನ್ನು ತೆರೆಯಲಾಗಿದೆ. ಆದರಂತೆ, ಇತ್ತೀಚೆಗೆ ಸಸ್ಯ ಆಹಾರದ ಗ್ರಾಹಕರು ಪನೀರ್ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಆದ್ದರಿಂದ, ಗ್ರಾಹಕರಿಗೆ ಪೌಷ್ಠಿಕಾಂಶ ನೀಡುವ ಸಲುವಾಗಿ ಹಾಗೂ ಒಕ್ಕೂಟಕ್ಕೆ ಲಾಭಾಂಶ ಹೆಚ್ಚಿಸುವ ಉದ್ದೇಶದಿಂದ ಕೆಲ ದಿನಗಳಲ್ಲೇ ರಾಬಕೊವಿ ಒಕ್ಕೂಟದಲ್ಲಿ ಇಪ್ತತ್ತರಿಂದ ಮೂವತ್ತು ಲಕ್ಷ ರೂ. ವೆಚ್ಚದಲ್ಲಿ ದಿನಕ್ಕೆ ಎರಡು ಮೆಟ್ರಿಕ್ ಟನ್ ಸಾರ್ಮಥ್ಯದ ಪನೀರ್ ಉತ್ಪಾದನೆ ಘಟಕ ತೆರೆಯಲು ಆಡಳಿತ ಮಂಡಳಿ ನಿರ್ಧಾರಿಸಲಾಗಿದೆ. ಈಗಾಗಲೇ ಇದರ ಬಗ್ಗೆ ಕ್ರೀಯಾ ಯೋಜನೆಯೂ ರೂಪಿಸಿದೆ. ಕೆಲ ದಿನಗಳಲ್ಲೇ ರಾಬಕೊವಿ ಕಚೇರಿಯಲ್ಲಿ ಘಟಕ ಪ್ರಾರಂಭಿಸಿ ಮಾರಾಟ ಮಾಡಲಾಗುವುದು.
ಗುಣಮಟ್ಟಕ್ಕೆ ಕೊಠಡಿ ಆರಂಭ : ನಗರದ ರಾಬಕೊವಿ ಒಕ್ಕೂಟದಿಂದ ಹೆಚ್ಚಾಗಿ ಮೊಸರು ಉತ್ಪಾದಿಸಲಾಗುತ್ತಿದ್ದು ನಾಲ್ಕು ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮೊಸರು ಕೆಡದಂತೆ ತಂಪುಯಾಗಿರಿಸಲು ಒಕ್ಕೂಟದ ಆವರಣದಲ್ಲಿಯೇ ಇನ್‌ಕೊಬಿಷನ್ ರೂಮ್ ನಿರ್ಮಿಸಲಾಗುತ್ತಿದ್ದು , ಇದರಲ್ಲಿ ಮೊಸರು ಸಂಗ್ರಹಿಸಿದರೆ ಹಾಳಾಗದಂತೆ ಎರಡ್ಮೂರು ದಿನಗಳವರೆಗೆ ಉಳಿಯಲಿದೆ. ಇದಲ್ಲದೆ, ಬ್ಲಾಸ್ಟ್ ಚಿಲ್ಲರ್ ಕೊಠಡಿಯನ್ನು ನಿರ್ಮಿಸಿ ಮೊಸರು ಹಾಗೂ ಹಾಲಿನ ಗುಣಮಟ್ಟ ಪರೀಕ್ಷಿಸಲಾಗುವುದು. ಇದರಿಂದ ಒಕ್ಕೂಟಕ್ಕೆ ಹಾಲಿನ ಉತ್ಪನ್ನ ಹಾಳಾಗದಂತೆ ನಷ್ಟ ತಡೆಯಬಹುದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವ ಉದ್ದೇಶ ಹೊಂದಿದೆ.
ಐಸ್ ಕ್ರೀಮ್ ನೇರ ಮಾರಾಟ : ರಾಬಕೊವಿ ಪ್ರಾರಂಭವಾಗಿ ಕೆಲ ದಶಕಗಳ ಕಳೆದಿದ್ದು ಕೆಲ ಉತ್ಪನಗಳನ್ನು ಇಲ್ಲಿಯೇ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಕೆಲವೊಂದನ್ನು ಕೆಎಂಎಫ್ ನಿಂದ ಸರಬರಾಜು ಮಾಡಿಕೊಂಡು ಗ್ರಾಹಕರಿಗೆ ನೀಡಲಾಗುತ್ತಿದೆ. ಕೆಲ ತಿಂಗಳಿಂದ ಒಕ್ಕೂಟವು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕೆಎಂಎಫ್‌ನಿಂದ ತಯಾರಿಸಿದ ಐಸ್ ಕ್ರೀಂ ಗಳನ್ನು ಸೂಪರ್ ಸ್ಟಾಕಿಸ್ಟ್ ಮೂಲಕ ರಾಬಕೊವಿ ಒಕ್ಕೂಟದ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುವುದು ಇದರಿಂದ ಒಕ್ಕೂಟಕ್ಕೆ ಶೇ. 8ರಷ್ಟು ಲಾಭ ಬರಲಿದೆ. ಇದರಿಂದ ಅದಾಯವೂ ಹೆಚ್ಚಲಿದೆ ಹಾಗೂ ನಷ್ಟದಲ್ಲಿರುವ ಒಕ್ಕೂಟವೂ ಲಾಭದಾಯಕವಾಗಲಿದೆ.
9.50 ಲಕ್ಷ ರಾಸುಗಳು: ಇಲ್ಲಿನ ಒಕ್ಕೂಟ ವ್ಯಾಪ್ತಿಯಲ್ಲಿ ರಾಯಚೂರು 2.66 ಲಕ್ಷ, ಕೊಪ್ಪಳ 2.69 ಲಕ್ಷ , ವಿಜಯನಗರ 2.70 ಲಕ್ಷ ಹಾಗೂ ಬಳ್ಳಾರಿ 1.43 ಲಕ್ಷ ಸೇರಿ ಒಟ್ಟು 9.50 ಲಕ್ಷ ರಾಸುಗಳಿವೆ. ಆದರೆ, ನಾಲ್ಕು ಜಿಲ್ಲೆಯಲ್ಲಿ ಒಟ್ಟಾರೆ ಕೇವಲ 3.50 ಲಕ್ಷ ರಾಸುಗಳು ಮಾತ್ರ ಹಾಲು ವಿತರಿಸುತ್ತಿವೆ. ಇದರಿಂದ ಆರು ಲಕ್ಷದಷ್ಟು ರಾಸುಗಳಲ್ಲಿ ಬಹುತೇಕ ರಾಸುಗಳು ಹಾಲು ವಿತರಣೆಗೆ ಯೋಗ್ಯವಾಗಿಲ್ಲ. ಆದ್ದರಿಂದ, ಲಕ್ಷಾಂತರ ರಾಸುಗಳು ಹಾಲು ಏಕೆ ನೀಡುತ್ತಿಲ್ಲ ಎಂಬುದು ಅರಿಯಲು ಒಕ್ಕೂಟದ ಸಿಬ್ಬಂದಿಯೂ ಕೆಲ ದಿನಗಳಲ್ಲೇ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲು ಸೂಚಿಸಲು ಕ್ರಮವಹಿಸಲಾಗುವುದು. ಅಲ್ಲದೆ, ಇನ್ನೂ ಲಕ್ಷಾಂತರ ರಾಸುಗಳು ಹಾಲು ವಿತರಣೆಗೆ ಮುಂದಾದರೆ ಒಕ್ಕೂಟದ ಸಂಗ್ರಹ ಸಾರ್ಮಥ್ಯವೂ ಹೆಚ್ಚಲಿದ್ದು ಅಭಿವೃದ್ಧಿ ಕೂಡ ಹೊಂದಲಿದೆ ಎಂದು ಒಕ್ಕೂಟದ ಎಂಡಿ ತಿಳಿಸಿದರು.
ಕೋಟ್.. ಸದ್ಯ ಒಕ್ಕೂಟದಲ್ಲಿ ಜನರಿಗೆ ಪೌಷ್ಠಿಕಾಂಶ ನೀಡುವ ಹಾಗೂ ಬೇಡಿಕೆಯಿರುವ ಪನೀರ್ ಉತ್ಪಾದನೆ ಘಟಕ ತೆರೆಯಲಾಗುವುದು. ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು.
- ಆರ್.ಪ್ರಭುಶಂಕರ್, ಎಂಡಿ, ರಾಬಕೊವಿ ಒಕ್ಕೂಟ.