ಹಿರಿಯರ ಆದರ್ಶ ಬದುಕನ್ನು ಮುಂದುವರಿಸಿ

JLR ph 1 Jun 9 Sharanara Sammelana
filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.023991; highlight: 1; algolist: 0; multi-frame: 1; brp_mask: 8; brp_del_th: 0.0083,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 42;
Published on

ಜಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯೆ ವಿವೇಕದ ಬದಲಾಗಿ ಅವಿವೇಕವನ್ನು ಬೆಳೆಸುತ್ತಿದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಟ್ಟಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅರಿಶಿನಗುಂಡಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯವಹಿಸಿ ಮಾತನಾಡಿದರು.

ಪದವಿ ಬದುಕಿಗೆ ಸಹಾಯವಾಗಬೇಕೆ ಹೊರತು ವಿನಾಶದ ಕಡೆಗೆ ಕರೆದುಕೊಂಡು ಹೋಗಬಾರದು. ಹಳ್ಳಿಗಳಲ್ಲಿ ಏನೂ ಓದದೇ ಇರುವವರು ಉತ್ತಮವಾದ ಜೀವನ ನಡೆಸುತ್ತಿದ್ದಾರೆ. ಅವರೆಲ್ಲ ಅಹಂಕಾರವಿಲ್ಲದೆ ವಿನಯ ಮತ್ತು ವಿವೇಕದಿಂದ ಹಿರಿಯರೊಂದಿಗೆ ಬದುಕುತ್ತಿದ್ದಾರೆ. ಅಂತಹ ಹಿರಿಯರ ಆದರ್ಶ ಬದುಕುಗಳನ್ನು ಯುವ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಸಮಾಜದಲ್ಲಿ ಸರ್ವಧರ್ಮದವರು ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು. ಜಾತಿ ವ್ಯವಸ್ಥೆ, ಮೌಢ್ಯ, ಅಂಧಕಾರಗಳಿಂದ ಹೊರ ಬಂದು ನಾವೆಲ್ಲರೂ ಒಂದು ಎಂಬ ಭಾವನೆ ಇರಬೇಕು ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಪ್ರಸ್ತುತ ರೈತರು ಕಳೆ ತೆಗೆಯಲು ಕಳೆನಾಶಕಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದರು.

ಜಿಪಂ ಮಾಜಿ ಸದಸ್ಯರಾದ ಕೆ.ಪಿ. ಪಾಲಯ್ಯ, ಎಸ್.ಕೆ. ಮಂಜುನಾಥ್, ಪ್ರೇರಣಾ ಸಮಾಜ ಸೇವಾ ಟ್ರಸ್ಟ್ ನಿರ್ದೇಶಕ ಫಾದರ್ ಸಿಲ್ವೆಸ್ಟರ್ ಫೆರೆರಾ ಮಾತನಾಡಿದರು.

ಮುಖಂಡರಾದ ಕೃಷ್ಣಮೂರ್ತಿ, ರೇವಣಸಿದ್ದಪ್ಪ, ಗೌರಮ್ಮ, ಕಾವ್ಯ, ಕಿರಣ್​ಕುಮಾರ್, ಲೋಕೇಶ್, ನಾರಪ್ಪ, ಪತ್ರಕರ್ತ ಸೋಮನಗೌಡ, ಸುಧೀರ್​ರೆಡ್ಡಿ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net