

ವಿಜಯಪುರ : ಜನಕಲ್ಯಾಣ ಹಾಗೂ ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರು ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯವನ್ನು ಹೊಂದಿದ್ದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಹೇಳಿದರು.
ಇಲ್ಲಿನ ಆಲಕುಂಟೆ ನಗರದಲ್ಲಿ ಪಂ.ದೀನದಯಾಳ್ ಉಪಾಧ್ಯಾಯರ ಜಯಂತಿ ನಿಮಿತ್ತ ಭಾನುವಾರ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್‌ನಿಂದ ಜನಹಿತ ಅಸಾಧ್ಯ ಎಂದು ಮನಗಂಡು ಜನಸಂಘವನ್ನು ಸ್ಥಾಪಿಸಿದರು. ಈ ಜನಸಂಘವೇ ಇಂದು ಬಿಜೆಪಿಯಾಗಿ ವಿಶ್ವದಲ್ಲಿಯೇ ಬೃಹತ್ ಪಕ್ಷವಾಗಿ ಮುನ್ನಡೆಯುತ್ತಿದೆ. ದೀನದಯಾಳ್ ಉಪಾಧ್ಯಾಯರು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಮುಖಂಡರಾದ ಸುನೀಲ ಜೈನಾಪುರ, ಭೀಮಾಶಂಕರ ಹದನೂರ, ಬಸವರಾಜ ಬಿರಾದಾರ, ಡಾ.ಸುರೇಶ ಬಿರಾದಾರ, ಸತೀಶ್ ಪಾಟೀಲ, ಬಸವರಾಜ ಬೈಚಬಾಳ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ರಾಜೇಶ ತಾವಸೆ, ಸಂದೀಪ್ ಪಾಟೀಲ್, ವಿನಾಯಕ ದಹಿಂಡೆ, ರವಿ ಚವ್ಹಾಣ, ಅನೀಲ ಉಪ್ಪಾರ, ಪ್ರವೀಣ್ ಕೂಡಿಗೆ, ಸಂತೋಷ ನಿಂಬರಗಿ, ಸುನೀಲ ಕೃಷ್ಣಮಾಚಾರಿ, ಶ್ರೀಧರ ಬಿಜ್ಜರಗಿ, ದಶರಥ, ರಾಜಶೇಖರ್ ತಾಳಿಕೋಟೆ ಇತರರಿದ್ದರು