ಪಂಢರಪುರ ಪಾದಯಾತ್ರೆ 29ರಿಂದ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹೊಸಯಲ್ಲಾಪುರ ಛಾವಣಿ ಓಣಿಯ ಶ್ರೀ ಮಾರುತಿ ಹರಿ ಮಂದಿರದಿಂದ ಜೂ. 29ರಂದು ಶ್ರೀ ಕ್ಷೇತ್ರ ಪಂಢರಪುರಕ್ಕೆ ಪಾದಯಾತ್ರೆ ಹೊರಡಲಿದೆ. ಯಾತ್ರೆಯು ಅಮ್ಮಿನಬಾವಿ, ಸವದತ್ತಿ, ಮುನವಳ್ಳಿ, ಗೊಡಚಿ, ಸಾಲಹಳ್ಳಿ, ಮುಧೋಳ, ಜಮಖಂಡಿ, ಕಕಮರಿ, ಜತ್ತ ಮಾರ್ಗವಾಗಿ ಜು. 14ರಂದು ಪಂಢರಪುರಕ್ಕೆ ತಲುಪಲಿದೆ. ಯಾತ್ರೆಯಲ್ಲಿ ಭಾಗವಹಿಸುವ ಭಕ್ತರು ಹೆಚ್ಚಿನ ಮಾಹಿತಿಗೆ ದಿಂಡಿ ವ್ಯವಸ್ಥಾಪಕ ರಾಜು ಕಾಳೆ ಅಥವಾ ಸುಭಾಷ ಪವಾರ ಅವರನ್ನು ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net