ಪಂಢರಪುರ ಪಾದಯಾತ್ರೆ 18ರಿಂದ

WEB LOGO
Published on

ಧಾರವಾಡ: ಆಷಾಢ ಏಕಾದಶಿ ನಿಮಿತ್ತ ನಗರದ ಭಕ್ತರು ಸುಭಾಷ ಪವಾರ ನೇತೃತ್ವದಲ್ಲಿ ಜೂ. 18ರಂದು ಶ್ರೀ ಕ್ಷೇತ್ರ ಪಂಢರಪುರಕ್ಕೆ ಪಾದಯಾತ್ರೆ ಹೊರಡಲಿದ್ದಾರೆ.

ಜೂ. 18ರಂದು ಬೆಳಗ್ಗೆ 7 ಗಂಟೆಗೆ ಹೊಸಯಲ್ಲಾಪುರ ಛಾವಣಿ ಓಣಿಯಿಂದ ಹೊರಡುವ ಪಾದಯಾತ್ರೆ, ಅಮ್ಮಿನಭಾವಿ, ಸವದತ್ತಿ, ಮುನವಳ್ಳಿ, ಶ್ರೀಕ್ಷೇತ್ರ ಗೊಡಚಿ, ಮುಧೋಳ, ಜಮಖಂಡಿ ಮಾರ್ಗವಾಗಿ ಉಮರಾಣಿ, ಜತ್ತ ಸೇರಿ ಇತರ ಗ್ರಾಮಗಳ ಮೂಲಕ ಜು. 3ರಂದು ಪಂಢರಪುರಕ್ಕೆ ತಲುಪಲಿದೆ. ಆಸಕ್ತರು ಜೂ. 17ರಂದು ಸಂಜೆ ಹೊಸಯಲ್ಲಾಪುರ ಛಾವಣಿ ಓಣಿಯಲ್ಲಿನ ಹರಿಮಂದಿರದಲ್ಲಿ ಹಾಜರಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net