

ಹುಬ್ಬಳ್ಳಿ: ಇಲ್ಲಿಯ ವಿಶ್ವೇಶ್ವರ ನಗರ ಶಾಂತಿ ಕಾಲನಿ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನ ಸನ್ನಿಧಿಯಲ್ಲಿ ಯುವ ಪಂಡಿತ ಡಾ. ಶ್ರೀಹರಿ ಆಚಾರ್ಯ ವಾಳ್ವೆಕರ ಅವರಿಗೆ 2024ನೇ ಸಾಲಿನ "ಪಂಡಿತ ಪಂಢರಿನಾಥಚಾರ್ಯ ಗಲಗಲಿ' ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಲಾಯಿತು.
ಪಂಡಿತ ವಾಸುದೇವಾಚಾರ್ಯ ಗಲಗಲಿ ಅವರು ಪ್ರಶಸ್ತಿ ಜೊತೆಗೆ ವಿಶೇಷ ಸ್ಮರಣಫಲಕ ಹಾಗೂ ಹತ್ತು ಸಾವಿರ ರೂ. ನಗದು ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶ್ರೀಹರಿ ವಾಳ್ವೆಕರ ಅವರು, ಸಾಕಷ್ಟು ಪ್ರಶಸ್ತಿಗಳು ಬಂದಿದ್ದರೂ, ಈ ಪ್ರಶಸ್ತಿಯು ನನಗೆ ಹೆಚ್ಚು ಗೌರವ ತಂದಿದೆ. ನನ್ನ ಮೇಲೆ ದೊಡ್ಡ ಜವಾಬ್ದಾರಿ ಕೂಡ ಬಿದ್ದಿದೆ. ಅವರು ರಚಿಸಿದ ಗ್ರಂಥ, ಕಾವ್ಯಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕು ಹಾಗೂ ಅವರ ಕಾವ್ಯ ರಚನಾ ಶೈಲಿಯನ್ನು ಪ್ರತಿಯೊಬ್ಬ ಸಂಸತ ಪಂಡಿತರು ಅನುಕರಣೆ ಮಾಡಿಕೊಳ್ಳಬೇಕು. ಆಗಮಾತ್ರ ಜಗತ್ತು ಕಾವ್ಯಮಯ ಆಗಲು ಸಾಧ್ಯ ಎಂದರು.
ಪಂಡಿತ ವೆಂಕಟ ನರಸಿಂಹಚಾರ್ಯರು, ಪಂಡಿತ ತಡಕೋಡ ವಾದಿರಾಜಾಚಾರ್ಯರು, ಪಂಡಿತ ಚಂದಿ ಆಚಾರ್ಯರು, ಆರಾಧನಾ ಸೇವಾ ಸಮಿತಿ ಅಧ್ಯಕ್ಷ ವಿಷ್ಣು ತೀರ್ಥ ಕಲ್ಲೂರಕರ್ ಮಾತನಾಡಿದರು.
ಸಮಿತಿಯ ಉಪಾಧ್ಯಕ್ಷ ಅರುಣ ಉರಣಕರ, ಮೋಹನ ಜಕಾತಿ, ಮಂಜುನಾಥ ಜಂತಲಿ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಘಟಿಕಾರ, ಮಾಧವ ಬಟವಿ, ಕಾಂತೇಶ ಮುದ್ರಿ, ವಿಠ್ಠಲ ಕುಲಕರ್ಣಿ, ರಾಘವೇಂದ್ರ ಪಾರಗಾಂವಕಾರ, ವಿವೇಕ್ ಪೈ ಹಾಗೂ ರಾಯರ ಭಕ್ತರು ಪಾಲ್ಗೊಂಡಿದ್ದರು.