ಭಾರತೀಯ ವಿಚಾರ ದರ್ಶನದ ಪ್ರತಿಪಾದಕ ಪಂ ದೀನ ದಯಾಳ

25 MDG 1- DINADAYAL
Published on

ಮುಂಡರಗಿ: ಪಂಡಿತ ದೀನ ದಯಾಳ ಉಪಾಧ್ಯಾಯರು ಭಾರತೀಯ ವಿಚಾರ ದರ್ಶನದ ಬಲವಾದ ಪ್ರತಿಪಾದಕರಾಗಿದ್ದರು. ಡಾ.ಶಾಮಾ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ ದಯಾಳ ಉಪಾಧ್ಯಾಯರು ಭಾರತೀಯ ಜನಸಂಘ ಪ್ರಾರಂಭಿಸಿದ್ದರು. ಅಂತಹ ಹಿರಿಯರ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಪಕ್ಷವು ಇದೀಗ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು.


ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಮುಂಡರಗಿ ಮಂಡಲ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಂಡಿತ ದೀನ ದಯಾಳರು ರಾಜಕಾರಣಿಯಾಗಿದ್ದರು. ಅವರ ಸಿದ್ಧಾಂತಕ್ಕೆ ಯಾವುದೇ ರಾಜಕೀಯ ಅಡೆತಡೆಗಳಿರಲಿಲ್ಲ. ಅವರ ಸಿದ್ಧಾಂತವನ್ನು ಸಮಗ್ರ ಮಾನವತವಾದ ಎಂದು ಕರೆಯಲಾಗುತ್ತದೆ ಎಂದರು.


ಬಿಜೆಪಿ ಮುಂಡರಗಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿಳಿಮಗ್ಗದ, ಪ್ರಶಾಂತ ಗುಡದಪ್ಪನವರ, ಪುರಸಭೆ ಸದಸ್ಯೆ ಜ್ಯೋತಿ ಹಾನಗಲ್ಲ, ಶಿವನಗೌಡ ಗೌಡರ, ಮೈಲಾರಪ್ಪ ಕಲಕೇರಿ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ಚಿಕ್ಕಣ್ಣವರ, ಮಂಜುನಾಥ ಮುಧೋಳ, ಯಲ್ಲಪ್ಪ ಗಣಾಚಾರಿ, ದೇವು ಹಡಪದ, ಶಿವಕುಮಾರ ಕುರಿ, ಮಾರುತಿ ನಾಗನಹಳ್ಳಿ, ಅಶೋಕ ಚೂರಿ, ಪವನ ಲೇಂಡ್ವೆ, ಯಂಕಪ್ಪ ಪುರದ, ಮರಿಯಪ್ಪ ರಾಮೇನಹಳ್ಳಿ, ಸುರೇಶ ಬಾರಿಗಿಡದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net