ಕ್ರೀಡಾ ಕೂಟದಲ್ಲಿ ಭಾಗವಹಿಸುವುದು ಮುಖ್ಯ

26-pnp 2
Published on

ಪಾಂಡವಪುರ : ಕ್ರೀಡಾ ಕೂಟದಲ್ಲಿ ಉತ್ಸಾಹದಿಂದ ಭಾಗವಹಿಸುವುದು ಮುಖ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಹೇಳಿದರು.
ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಪೌರಕಾರ್ಮಿಕರಿರಾಗಿ ಗುರುವಾರ ಆಯೋಜಿಸಿದ್ದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸೋಲು ಗೆಲುವು ಎಂಬುದನ್ನು ಲೆಕ್ಕಚಾರ ಹಾಕದೆ ಪ್ರತಿಯೊಬ್ಬ ಪೌರಕಾರ್ಮಿಕರೂ ಕೂಟದಲ್ಲಿ ಭಾಗವಹಿಸಬೇಕು. ಸಣ್ಣ ಸ್ಪರ್ಧೆಯಾದರೂ ಭಾಗವಹಿಸುವುದು ಅತಿಮುಖ್ಯ ಎಂದರು.
ಪ್ರತಿದಿನ ಸ್ವಚ್ಛತಾ ಕಾರ್ಯಗಳಲ್ಲಿ ತಲ್ಲಿನರಾಗುವ ಪೌರಕಾರ್ಮಿಕರಿಗೆ ಕ್ರೀಡೆ ಮನೋಲ್ಲಾಸ ನೀಡುತ್ತದೆ. ಜತೆಗೆ ಆರೋಗ್ಯ ದೃಷ್ಠಿಯಿಂದಲೂ ಕ್ರೀಡೆ ಸಹಕಾರಿ. ಪ್ರತಿವರ್ಷದಂತೆ ಈ ವರ್ಷವೂ ಪೌರಕಾರ್ಮಿಕರಿಗೆ ಕ್ರಿಕೆಟ್, ಗುಂಡು ಎಸೆತ, ಓಟದ ಸ್ಪರ್ಧೆ, ವಾಲಿಬಾಲ್, ಮಹಿಳೆಯರಿಗೆ ಲೆಮನ್ ಆ್ಯಂಡ್ ಸ್ಪೂನ್, ಬಾಲ್ ಇನ್ ದ ಬಾಸ್ಕೆಟ್ ಇತ್ಯಾದಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಾದವರಿಗೆ ಪೌರಕಾರ್ಮಿಕ ದಿನಾಚರಣೆ ದಿನದಂದು ಬಹುಮಾನ ವಿತರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net