ಪಾಂಡವಪುರ ಪಿಕಾರ್ಡ್‌ಗೆ ಬಿರುಸಿನ ಮತದಾನ

8-pnp 2
Published on

ಪಾಂಡವಪುರ : ರೈತಸಂಘ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಗೆ ಪ್ರತಿಷ್ಠೆಯಾಗಿದ್ದ ತಾಲೂಕಿನ ಪಿಕಾರ್ಡ್ (ಪಾಂಡವಪುರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್)ಗೆ ಶನಿವಾರ ಚುನಾವಣೆ ನಡೆಯಿತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ತಾಲೂಕಿನ ಒಟ್ಟು 14 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ರೈತಸಂಘ, ಕಾಂಗ್ರೆಸ್ ಮೈತ್ರಿಕೂಟ ಮತ್ತು ಜೆಡಿಎಸ್ ಬೆಂಬಲಿತರಾಗಿ ಒಟ್ಟು 28 ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ ಒಬ್ಬ ಅಭ್ಯರ್ಥಿ ಕಣದಲ್ಲಿದ್ದರು. ಒಟ್ಟು ಮತದಾರರು : ಬ್ಯಾಂಕಿನಲ್ಲಿ ಒಟ್ಟು 3,371 ಮತದಾರರಿದ್ದು, 1,909 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಅನರ್ಹ ಮತದಾರರಿಗೂ ಮತ ಚಲಾವಣೆಗೆ ಅವಕಾಶ : ವಿವಿಧ ಕಾರಣಗಳಿಂದ ಅನರ್ಹಗೊಂಡಿದ್ದ 1,432 ಮತದಾರರಿಗೆ ಕೋರ್ಟ್ ಆದೇಶದಂತೆ ಚುನಾವಣೆಯಲ್ಲಿ ಪ್ರತೇಕವಾಗಿ ಮತ ಚಲಾವಣೆಗೆ ಅವಕಾಶ ನೀಡಲಾಗಿತ್ತು. ಚುನಾವಣಾ ಧಿಕಾರಿಯಾಗಿ ತಾಪಂ ಇಒ ಲೋಕೇಶ್ ಮೂರ್ತಿ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net