ಕದಲಗೆರೆಯಲ್ಲಿ ಬಂದಂತಮ್ಮ ಹಬ್ಬ

8mlk01
Published on

ಪಾಂಡವಪುರ : ತಾಲೂಕಿನ ಕದಲಗೆರೆ ಗ್ರಾಮದಲ್ಲಿ ಗ್ರಾಮ ದೇವತೆ ಬಂದಂತಮ್ಮನ ಹಬ್ಬ ವಿಜೃಂಭಣೆ ನೆರವೇರಿತು. ಗ್ರಾಮದ ಪ್ರತಿ ಮನೆಗಳಲ್ಲೂ ಸಂಭ್ರಮ ಕಳೆಗಟ್ಟಿತ್ತು.ದೇವಿಗೆ ಪೂಜೆ ಸಮರ್ಪಿಸಿ, ನೈವೇದ್ಯ ಅರ್ಪಿಸಿದ ಭಕ್ತರು ಮನೆ ಮನೆಯಲ್ಲೂ ಬಗೆ ಬಗೆಯ ಭೋಜನ ತಯಾರಿಸಿ, ಅಕ್ಕ ಪಕ್ಕದ ಗ್ರಾಮದವರು, ನೆಂಟರನ್ನು ಕರೆಸಿ ಊಟೋಪಚಾರ ಏರ್ಪಡಿಸಿದ್ದು ವಿಶೇವಾಗಿತ್ತು. ಕಳೆದ 50 ವರ್ಷಗಳಿಂದಲೂ ಗ್ರಾಮ ದೇವತೆ ಬಂದಂತಮ್ಮನ ಹಬ್ಬವನ್ನು
ವಿವಿಧ ಕಾರಣಗಳಿಂದ ಗ್ರಾಮಸ್ಥರು ಆಚರಣೆ ಮಾಡಿರಲಿಲ್ಲ. ಹೀಗಾಗಿ ಮಂಗಳವಾರ ನೆರವೇರಿದ ಹಬ್ಬದಲ್ಲಿ ವಿಶೇಷ ಉತ್ಸಾಹ ಸಡಗರ ಕಂಡುಬಂತು. ಕೆಲವರು ತಮ್ಮ ಹೊಲ ಗದ್ದೆಗಳಲ್ಲೇ ಶಾಮಿಯಾನ ಹಾಕಿಸಿ, ಬಾಡೂಟ ಏರ್ಪಡಿಸಿದ್ದರು.ಗ್ರಾಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ ಕಾರಣ ಜಕ್ಕನಹಳ್ಳಿ-ಮೇಲುಕೋಟೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಕ್ಕನಹಳ್ಳಿ ಸರ್ಕಲ್ ನಿಂದ ಕದಲಗೆರೆ ಗ್ರಾಮದವರೆಗೆ ನೂರಾರು ಸಂಖ್ಯೆಯಲ್ಲಿ ವಾಹನಗಳು ಜಮಾವಣೆಗೊಂಡ ಹಿನ್ನೆಲೆಯಲ್ಲಿ ಕೆಲವರು ಹೊಲ-ಗದ್ದೆಗಳನ್ನು ಸುತ್ತಿ, ಬಳಸಿ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net