ಪಂಚಶೀಲ ಪಾದಯಾತ್ರೆ ಸಮಾರೋಪ 24ರಂದು

Dvd Sannati Prog
ಮಲ್ಲೇಶಪ್ಪ
Published on

ದೇವದುರ್ಗ: ಬೌದ್ಧರ ಐತಿಹಾಸಿಕ ಕ್ಷೇತ್ರ ಸನ್ನತಿಯಿಂದ ಬೆಂಗಳೂರಿನವರೆಗೆ ಡಿ.15ರಂದು ಶ್ರೀ ಬಂತೇಜಿ ಬೋಧಿದತ್ತ ನೇತೃತ್ವಲ್ಲಿ ಹಮ್ಮಿಕೊಂಡ ಪಂಚಶೀಲ ಪಾದಯಾತ್ರೆ ಜ.24ರಂದು ಬೆಂಗಳೂರು ತಲುಪಲಿದ್ದು, ಅಂದೇ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಧಮ್ಮದೀಪ ಚಾಲನೆ ಸಮಿತಿ ತಾಲೂಕು ಸಂಚಾಲಕ ಮಲ್ಲೇಶಪ್ಪ ಹುನುಗುಂದಬಾಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸನ್ನತಿಯಿಂದ ಅರಂಭವಾದ ಪಂಚಶೀಲ ಪಾದಯಾತ್ರೆ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತಮಕೂರು ಸೇರಿ ವಿವಿಧ ಭಾಗದ ಮೂಲಕ ಸುಮಾರ 800ಕಿಮೀ ಸಂಚರಿಸಿ ಜನಜಾಗೃತಿ ಮೂಡಿಸಿದೆ. ಸಮಾರೋಪ ಸಮಾರಂಭದಲ್ಲಿ 10 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸನ್ನತಿ ಕ್ಷೇತ್ರವನ್ನು ಆಂಧ್ರಪ್ರದೇಶದ ಬುದ್ಧ ವನ ಮಾದರಿಯಲ್ಲಿಅಭಿವೃದ್ಧಿ, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ 200ಎಕರೆಯಲ್ಲಿ 7ಸ್ಟಾರ್ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಬೌದ್ಧರ ಸಮಗ್ರ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂ.ಅನುದಾನ ಬಜೆಟ್‌ನಲ್ಲಿ ಮೀಸಲಿಡಬೇಕು. ಪ್ರತಿವರ್ಷ ಗೌತಮ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು.

ಪ್ರತಿವರ್ಷ ಫೆ.12ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರ್ಕಾರದಿಂದ ಆಚರಣೆ ಮಾಡವುದೂ ಸೇರಿ 10 ಬೇಡಿಕೆಗಳು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಮುಖಂಡರಾದ ನರಸಪ್ಪ ವಕೀಲ ಚಿಂಚೋಡಿ, ಮಲ್ಲಿಕಾರ್ಜನ್ ಮಸರಕಲ್, ಮಹಾಂತೇಶ ಭವಾನಿ, ರಾಮಣ್ಣ ಭವಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net