ಜನಜಾಗೃತಿಗಾಗಿ ಪಂಚಸೀಲ ಮೈತ್ರಿಯಾತ್ರೆ

1 ckm 7
ಚಿಕ್ಕಮಗಳೂರಿನ ಶಂಕರಪುರದ ಡಾ.ಬಿ.ಆರ್.ಅಂಬೇಡ್ಕರ್ ಶಾಲೆಯ ಸಮೀಪ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ ಚಾರಿಟಬಲ್ ಟ್ರಸ್ಟ್ ನಿಂದ ಜನಜಾಗೃತಿಗಾಗಿ ಪಂಚಸೀಲ ಮೈತ್ರಿಯಾತ್ರೆ ನಡೆಸಲಾಯಿತು. ಭಂತೆ ಭೋಧಿದತ್ತ, ಕೆ.ಟಿ.ರಾಧಾಕೃಷ್ಣ, ಮಲ್ಲೇಶ್, ಎಚ್.ಎಸ್.ಪುಟ್ಟಸ್ವಾಮಿ, ಪ್ರಸಾದ್, ಧರ್ಮೇಂದ್ರ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜನರಲ್ಲಿ ಜಾಗೃತಿ ಮೂಡಿಸಲು ನಗರದ ಶಂಕರಪುರದ ಡಾ.ಬಿ.ಆರ್.ಅಂಬೇಡ್ಕರ್ ಶಾಲೆಯಲ್ಲಿ ಅಕ್ಟೋಬರ್ ೧ ರಿಂದ ೫ ರವರೆಗೆ ಹಾಗೂ ನಗರ ಮತ್ತು ಗ್ರಾಮಗಳಲ್ಲಿ ಪಂಚಸೀಲ ಮೈತ್ರಿಯಾತ್ರೆ ಹಾಗೂ ಧ್ಯಾನ ಶಿಬಿರ ನಡೆಯಲಿದೆ ಎಂದು ಟಿ.ನರಸೀಪುರದ ನಳಂದ ಭೌದ್ಧವಿಹಾರದ ಭಂತೆ ಭೋಧಿದತ್ತ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ೬ರಂದು ಧ್ಯಾನ ಶಿಬಿರ ಆಯೋಜಿಸಲಾಗಿದೆ. ಈಕಾರ್ಯಕ್ರಮವನ್ನು ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಹೇಳಿದರು.
ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪ್ರಧಾನಕಾರ್ಯದರ್ಶಿ ಭಂತೆ ಆನಂದಮಹಾಥೇರಾ, ತಮಿಳುನಾಡಿನ ಭಂತೆ ಬುದ್ಧಪ್ರಕಾಶ್, ಬೆಂಗಳೂರಿನ ಸ್ಪೂರ್ತಿಧಾನ ಭೌದ್ಧವಿಹಾರದ ಭಂತೆ ಸುಗತಪಾಲ, ಕೊಳ್ಳೇಗಾಲದ ಜೇತವನಭೌದ್ಧವಿಹಾರ ಭತೆ ತೀಸ್ಸ,ಚಾಮರಾಜನಗರದ ನಳಂದ ಭೌದ್ಧವಿಶ್ವವಿದ್ಯಾಲಯದ ಬಿಕ್ಕುಣಿ ಗೌತಮಿ, ಇದೇ ವಿಶ್ವವಿದ್ಯಾಲಯದ ಭಿಕ್ಕುಣಿ ಮೈತ್ರಿಮಾತಾಜಿ, ಭಿಕ್ಕುಣಿ ಧಮ್ಮದಿನ್ನ ಮಾತಾಜಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಾಂಗ್ರೆಸ್ ಪರಿಶಿಷ್ಟವಿಭಾಗದ ಜಿಲ್ಲಾಧ್ಯಕ್ಷ ಮಲ್ಲೇಶ್, ಬಿಜೆಪಿ ಜಿಲ್ಲಾವಕ್ತಾರ ಎಚ್.ಎಸ್.ಪುಟ್ಟಸ್ವಾಮಿ, ಪ್ರಸಾದ್ ಮತ್ತು ಧರ್ಮೇಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net