ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ

Panchmukhi Anjaneya Temple Lokarpane
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾರುತೇಶ್ವರ ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ಮಾತನಾಡಿದರು. ಬಸವರಾಜ ಕಟಗೇರಿ, ಎಂ.ಆರ್.ಶಿಂಧೆ, ಅರುಣ ಲೋಕಾಪುರ, ಸಂತೋಷ ಹೊಕ್ರಾಣಿ, ಅಶೋಕ ಮುತ್ತಿನಮಠ, ಶಿವುಕುಮಾರ ಮೇಲ್ನಾಡ, ವಿಜಯ ಸುಲಾಖೆ, ರಾಜು ಗೌಳಿ ಇತರರು ಇದ್ದರು.
Published on

ಬಾಗಲಕೋಟೆ: ಮುಚಖಂಡಿ ಕ್ರಾಸ್‌ನ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಭವ್ಯ ಶೋಭಾಯಾತ್ರೆ, ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜ.18 ರಿಂದ 22 ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಮಾರುತೇಶ್ವರ ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.18 ರಂದು ಬೆಳಗ್ಗೆ 10 ಗಂಟೆಗೆ ನಗರದ ಕೊತ್ತಲೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಟಾಂಗಾ ಸ್ಟಾೃಂಡ್, ಪೊಲೀಸ್ ಗೇಟ್, ಎಂ.ಜಿ.ರೋಡ್, ಬಸವೇಶ್ವರ ವೃತ್ತ, ಕುಮಟಗಿ ಶೋ ರೂಮ್, ಶಕ್ತಿ ಟಾಕೀಜ್, ವಾಸವಿ ಟಾಕೀಜ್, ಮಹಾವೀರ ರಸ್ತೆ ಕ್ರಾಸ್, ಕೆರೂಡಿ ಆಸ್ಪತ್ರೆ ರಸ್ತೆ, ಲಕ್ಷ್ಮೀ ನಗರ ಕ್ರಾಸ್, ಕೆಂಪು ರೋಡ್ ಮೂಲಕ ದೇವಸ್ಥಾನ ತಲುಪಲಿದೆ. ಮೆರವಣಿಗೆ ವೇಳೆ ಕಲಾ ತಂಡಗಳು, ಜನಪದ ನೃತ್ಯಗಳು ಭಾಗವಹಿಸಲಿವೆ ಎಂದರು.

ಜ.22 ರಂದು ಬೆಳಗ್ಗೆ 11 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ನೆರವೇರಲಿದ್ದು, ಜಡೆಯ ಶಾಂತಲಿಂಗ ಸ್ವಾಮೀಜಿ, ಕುಮಾರ ವಿರೂಪಾಕ್ಷ ಸ್ವಾಮೀಜಿ, ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಹುಚ್ಚೇಶ್ವರ ಸ್ವಾಮೀಜಿ, ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಡಾ.ಶಿವಕುಮಾರ ಶಿವಾನಂದ ಸ್ವಾಮೀಜಿ, ಪಂ.ಬಿಂದು ಮಾಧವಾಚಾರ್ಯ ನಾಗಸಂಪಿಗೆ, ಮೌನೇಶ್ವರ ಸ್ವಾಮೀಜಿ ಮಹಾಪುರುಷ ಸಾನ್ನಿಧ್ಯ ವಹಿಸಲಿದ್ದಾರೆ. ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ವೈ.ಮೇಟಿ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಸ್.ಆರ್.ಪಾಟೀಲ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ಮಾತನಾಡಿ, ಹಳೇ ಬಾಗಲಕೋಟೆ ಹೊರ ವಲಯದ ಹಾದು ಹೋಗುವ ರಾಯಚೂರು ಬಾರ್ಶಿ ರಾಜ್ಯ ಹೆದ್ದಾರಿ 20 ರ ಪಕ್ಕ, ಅನತಿ ದೂರದಲ್ಲಿ ಬೇವಿನ ಮರವೊಂದರ ಅಡಿಯಲ್ಲಿ ಪವಾಡ ರೂಪದಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಹನುಮ ಎಲ್ಲ ಜನರ ಆರಾಧ್ಯ ದೈವನಾಗಿದ್ದು ವಿಶೇಷ. ನಂತರ ರಸ್ತೆ ವಿಸ್ತರಣೆಯಿಂದಾಗಿ ಸ್ಥಳಾಂತರಿಸಲಾಯಿತು. ನಂತರ ಹೊಸದಾಗಿ ದೇವಸ್ಥಾನ ನಿರ್ಮಾಣಕ್ಕೆ ನಿರ್ಧಾರ ಮಾಡಿದೇವು. ನೂರಾರು ಭಕ್ತರು ಸ್ವಯಂ ಪ್ರೇರಣೆಯಿಂದ ಕೈ ಜೋಡಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜಾ ದಿನದಂದು ಈ ಮಂದಿರಕ್ಕೂ ಭೂಮಿ ಪೂಜೆ ನೆರವೇರಿಸಲಾಯಿತು. 7-8 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಆರ್.ಶಿಂಧೆ, ಕಾರ್ಯದರ್ಶಿ ಅರುಣ ಲೋಕಾಪುರ, ಸ್ವಾಗತ ಸಮಿತಿ ಉಪಾಧ್ಯಕ್ಷ ಸಂತೋಷ ಹೊಕ್ರಾಣಿ, ಕಾರ್ಯದರ್ಶಿ ಅಶೋಕ ಮುತ್ತಿನಮಠ, ಸದಸ್ಯರಾದ ಶಿವುಕುಮಾರ ಮೇಲ್ನಾಡ, ವಿಜಯ ಸುಲಾಖೆ, ರಾಜು ಗೌಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net