

ಹಾನಗಲ್ಲ: ಲಿಂಗಾಯತ ಪಂಚಮಸಾಲಿ ಸಮಾಜದ ಎಲ್ಲ ಕುಟುಂಬಗಳು ಸಾಮಾಜಿಕ ಶೈಕ್ಷಣಿಕ ಸಮೀೆಯಲ್ಲಿ ಧರ್ಮ ಹಿಂದು ಹಾಗೂ ಜಾತಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸುವ ಮೂಲಕ ಎಲ್ಲರೂ ತಪ್ಪದೇ ಸಮೀೆಯಲ್ಲಿ ಮಾಹಿತಿ ನೀಡುವಂತೆ ಸಮಾಜದ ಹಾವೇರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಾವೇರಿ ಜಿಲ್ಲೆಯಲ್ಲಿ ಅತಿ ದೊಡ್ಡ ಲಿಂಗಾಯತ ಪಂಚಮಸಾಲಿ ಸಮುದಾಯವಿದೆ. ಸಮೀೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಎಲ್ಲ ಪಂಚಮಸಾಲಿ ಕುಟುಂಬದವರು ತಪ್ಪದೇ ಸಮೀೆಯಲ್ಲಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.