

ಹುಬ್ಬಳ್ಳಿ : ಪಂಚಮಸಾಲಿ ಜನಾಂಗ ಒಗ್ಗಟ್ಟಾದರೆ ರಾಜ್ಯ ರಾಜಕಾರಣವೇ ಬದಲಾಗಬಲ್ಲದು ಎಂದು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾದ್ಯಕ್ಷ ಸೋಮನಗೌಡ ಎಂ. ಮಾಲಿಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ಸೋಮವಾರದಂದು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಧಾರವಾಡ ಜಿಲ್ಲಾ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದರು.
ರಾಜ್ಯವ್ಯಾಪಿ ಪ್ರವಾಸ ಕೈಗೊಂಡು ಕನಿಷ್ಠ 5 ಲಕ್ಷಕಿಂತಲೂ ಹೆಚ್ಚು ಹೊಸ ಸದಸ್ಯರನ್ನು ನೋಂದಣಿ ಮಾಡಿಸುವುದರೊಂದಿಗೆ ಸಮಾಜದ ಸಂಘವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದು ತಿಳಿಸಿದರು.
ಪಂಚಮ ಸಾಲಿ ಸಮಾಜದ 3 ಪೀಠಗಳಲ್ಲಿಯೂ ನಿತ್ಯ ದಾಸೋಹದ ಜತೆಗೆ ಸಮಾಜದ ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತ ಯೋಜನೆಗಳನ್ನು ರೂಪಿಸಲಾಗುವುದು. ಗ್ರಾಮ ವಾತ್ಸವ್ಯ ಮಾಡಿ, ಸಮಾಜದ ಜನರನ್ನು ಒಗ್ಗೂಡಿಸಲಾಗುವುದು ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಡಾ. ಎಂ.ಎಂ. ನುಚ್ಚಿ, ಎನ್.ಎಸ್. ಬಿರಾದಾರ, ಜಿ.ಜಿ. ದ್ಯಾವನಗೌಡ್ರ, ಡಾ. ಎಚ್.ವಿ. ಬೆಳಗಲಿ, ರಾಜಶೇಖರ ಕರಕನ್ನವರ, ಶಿವಶಂಕರ ಬಳಿಗಾರ, ವೀರುಪಾಕ್ಷ ಲಟ್ಟೆ, ಎಂ.ಕೆ. ಮನಗೊಂಡ, ರಮೇಶ ಯಾದವಾಡ, ಸುರೇಶ ಲಿಂಬಿಕಾಯಿ, ಡಿ.ಬಿ. ಬಾರಿಕಾಯಿ, ಎಸ್.ಕೆ. ಕೊಟ್ರೇಶ, ವಿನೋದ ಅಲಾದಿ, ಸಿದ್ದೇಶ ಕಬಾಡರ ಹಾಗೂ ಇತರರು ಇದ್ದರು.
---------------------------------------