ಪಂಚಮಸಾಲಿ ಜಿಲ್ಲಾಧ್ಯಕ್ಷರಾಗಿ ಠಕ್ಕಣ್ಣವರ ಆಯ್ಕೆ

24Athni2
Published on

ಅಥಣಿ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಧರೆಪ್ಪ ಶಿವಪ್ಪ ಠಕ್ಕಣ್ಣವರ ಅವರು ಪಂಚಮಸಾಲಿ ಸಮುದಾಯದ ಚಿಕ್ಕೋಡಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು.

ಸಮೀಪದ ಕಬ್ಬೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ಜಿಲ್ಲಾ ಪಂಚಮಸಾಲಿ ಸಮುದಾಯದ ಸಂಘಟನಾ ಸಮಾವೇಶದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇವರನ್ನು ಅವಿರೋಧವಾಗಿ ಆಯ್ಕೆಮಾಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಗುಂಡು ಪಾಟೀಲ, ಮುತ್ತಣ್ಣ ಸಂತಿ, ವಕೀಲ ಪರಿಷತ್ ಜಿಲ್ಲಾ ಸಂಚಾಲಕ ಸುಭಾಸ ನಾಯಿಕ, ಅಶೋಕ ಹರಗಾಪುರ, ಚಿನಾನಂದ ಕಪಲಿ, ನಿಂಗಪ್ಪ ಫಿರೋಜ್,

ಎಸ್.ಎಂ.ರುದ್ರಗೌಡ್ರ, ಸುಧಾಕರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net