ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ನಡಹಳ್ಳಿ ಬೆಂಬಲ

Panchmasali, 2A Reservation, Talikote, Belgaum, Basavajaya Mrityunjaya Shri, Bharatiya Janata Party, A.S. Patil Nadahalli, BJP, 2D Reservation, Congress Govt.,
ತಾಳಿಕೋಟೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಪಂಚಮಸಾಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಬಸನಗೌಡ ಮಾಡಗಿ, ಎಂ.ಎಸ್.ಪಾಟೀಲ ನಾಲತವಾಡ, ಮಡುಸಾಹುಕಾರ ಬಿರಾದಾರ ಇತರರಿದ್ದರು.
Published on

ತಾಳಿಕೋಟೆ: ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಕೈಗೊಂಡಿರುವ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿ, ಪಂಚಮಸಾಲಿ ಸಮಾಜ ಬಾಂಧವರು 7-8 ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ಹೋರಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗಲೂ ಹೋರಾಟದ ಚಾಟಿ ಬೀಸಿದ್ದಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜದ ಹೋರಾಟ ನ್ಯಾಯಯುತವಾಗಿದೆ.

ಈ ಸಮಾಜಕ್ಕೆ ನ್ಯಾಯಕೊಡಬೇಕೆಂದು 2ಡಿ ಮಿಸಲಾತಿ ನೀಡಿ ಶೇ.4ರಷ್ಟು ಸವಲತ್ತುಗಳನ್ನು ಒದಗಿಸಿದ್ದರು. ಅದನ್ನು ಅನುಮೋದನೆಗೊಳಿಸುವಷ್ಟರಲ್ಲಿ ಚುನಾವಣೆ ಹತ್ತಿರ ಬಂದಿದ್ದರಿಂದ ಆಗಲಿಲ್ಲ. ಸದ್ಯ ಕಾಂಗ್ರೆಸ್ ಸರ್ಕಾರವಿದ್ದು, 2ಎ ಮೀಸಲಾತಿಯ ಹೋರಾಟದ ಅನುಮೋದನೆಯ ಜೊತೆಗೆ ಹಕ್ಕುಬದ್ಧತೆ ಕೇಳುತ್ತಿದ್ದಾರೆ. ಮೀಸಲಾತಿ ಅನುಷ್ಠಾನಗೊಳಿಸಿ ಪಂಚಮಸಾಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು.

ನನಗೆ ಸದ್ಯ ಅನಾರೋಗ್ಯವಿದ್ದ ಕಾರಣ ಸ್ವಾಮೀಜಿಗಳ ಹೋರಾಟದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಮುಂದೆ ಪಂಚಮಸಾಲಿ ಹೋರಾಟದಲ್ಲಿ ಪಾಲ್ಗೊಂಡು ಶ್ರೀಗಳ ಜೊತೆಗೆ ನಿಲ್ಲುವ ಕಾರ್ಯ ಮಾಡುತ್ತೇನೆಂದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ಪಂಚಮಸಾಲಿ ಸಮಾಜದ ಮುಖಂಡರಾದ ಎಂ.ಎಸ್.ಪಾಟೀಲ (ನಾಲತವಾಡ), ಮಡುಸಾಹುಕಾರ ಬಿರಾದಾರ, ಕಾಶಿನಾಥ ಮುರಾಳ, ಡಿ.ಕೆ.ಪಾಟೀಲ, ವೀರೇಶಗೌಡ ಪಾಟೀಲ, ಆರ್.ಎಲ್.ಕೊಪ್ಪದ, ಪ್ರಭು ಬಿಳೇಭಾವಿ, ನಿಂಗು ಕುಂಟೋಜಿ, ಮಂಜು ಮೈಲೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net