

ಕುಂದಾಪುರ: ಕುಂದಾಪುರದ ಮಹತ್ವ ತಿಳಿಸುವ ಮೊಹರು ವಾಡಬೇಕೆಂಬ ಆಶಯ ಹೊಂದಿದ್ದ ಅಂಚೆ ಇಲಾಖೆ ಪಂಚಗಂಗಾವಳಿ ಶಾಶ್ವತ ಅಂಚೆ ಮೊಹರು ಬಿಡುಗಡೆ ವಾಡಿದ್ದು, ಈ ಮೊಹರನ್ನು ಅಂಚೆ ಕಾರ್ಡು, ಕವರ್‌ಗಳಿಗೆ ಹಾಕಿಸುವ ಮೂಲಕ ಹೆಚ್ಚು ಜನಪ್ರಿಯ ವಾಡಬಹುದು ಎಂದು ಉಡುಪಿ ವಿಭಾಗದ ಅಂಚೆ ಇಲಾಖಾ ಅಧೀಕ್ಷಕ ರಮೇಶ ಪ್ರಭು ಹೇಳಿದರು.
ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಶುಕ್ರವಾರ ಪಂಚಗಂಗಾವಳಿ ಶಾಶ್ವತ ಅಂಚೆ ಮೊಹರು ಬಿಡುಗಡೆಗೊಳಿಸಿ ವಾತನಾಡಿದರು.
ಉಡುಪಿ ಜಿಲ್ಲಾ ಕಸಾಪ ವಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಅಂಚೆ ಇಲಾಖೆ ಕುಂದಾಪುರಕ್ಕೆ ಮಹತ್ವ ನೀಡಿ ಪಂಚಗಂಗಾವಳಿ ಮೊಹರು ಬಿಡುಗಡೆ ವಾಡಿರುವುದನ್ನು ಶ್ಲಾಸಿದರು. ಮೊಹರು ರಚನೆಗೆ ಸಹಕಾರ ನೀಡಿದ ಪಂಚಗಂಗಾವಳಿ ಸಮಿತಿ ಸಂಚಾಲಕ ಯು.ಎಸ್.ಶೆಣೈ ಹಾಗೂ ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಉಡುಪಿ ಅವರನ್ನು ಅಭಿನಂದಿಸಲಾಯಿತು.
ಕುಂದಾಪುರ ಪ್ರಧಾನ ಅಂಚೆ ಪಾಲಕ ಜಿ.ಎಸ್.ಮರಕಾಲ ಅತಿಥಿಗಳನ್ನು ಗೌರವಿಸಿದರು. ಉಪ ಪ್ರಧಾನ ಅಂಚೆ ಪಾಲಕಿ ಸೌಮ್ಯಶ್ರೀ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ಭಟ್ ಪ್ರಸ್ತಾವನೆಗೈದರು. ಪೂರ್ಣಿವಾ ಜನಾರ್ದನ ನಿರೂಪಿಸಿದರು. ಸಹಾಯಕ ಅಂಚೆ ಅಧೀಕ್ಷಕ ದಯಾನಂದ ವಂದಿಸಿದರು.