ಐಎಎಸ್ ಅಧಿಕಾರಿಗಳ ಸುತ್ತೋಲೆಯಿಂದ ಸಮಸ್ಯೆ - ಪಂಚಾಯಿತಿ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿಕೆ

Published on


ವಿಟ್ಲ: ಸರ್ಕಾರದ ಮಟ್ಟದ ಹಾಗೂ ಜಿಲ್ಲಾಮಟ್ಟದ ಐಎಎಸ್ ಅಧಿಕಾರಿಗಳು ಪಂಚಾಯಿತಿಗಳಿಗೆ ಸ್ವಂತದ ಹಣವನ್ನು ನೀಡಿ ಎಂಬ ಆದೇಶವನ್ನು ಸುತ್ತೋಲೆ ಮೂಲಕ ನೀಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳ ವಿರೋಧವಿದ್ದರೂ, ಹಿರಿಯ ಅಽಕಾರಿಗಳ ಒತ್ತಡಕ್ಕೆ ತಳಮಟ್ಟದ ಅಽಕಾರಿಗಳು ತಪ್ಪುದಾಖಲೆಗಳನ್ನು ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿಶೇಷ ನಿಯೋಗ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿ ಆದೇಶದ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸಲಿದೆ ಎಂದು ರಾಜೀವ ಗಾಂಧಿ ಪಂಚಾಯಿತಿ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.


ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಸಚಿವರು ಮಂಗಳೂರಿಗೆ ಬಂದಾಗ ಹಲವಾರು ಬೇಡಿಕೆಯನ್ನು ಇಟ್ಟಿದ್ದು, ಅದರಲ್ಲಿ ಗ್ರಾಮ ಪಂಚಾಯಿತಿಗೆ ೨೬ ಇಲಾಖೆ ಹಸ್ತಾಂತರ ಮಾಡುವ ಕೆಲಸ ಪ್ರಗತಿಯಲ್ಲಿದೆ. ಪಂಚತಂತ್ರ ೨ ಅಳವಡಿಸುವ ಸಂದರ್ಭ ಕಟ್ಟಡ ಸಂಖ್ಯೆ ಬಿಟ್ಟು ಹೋಗಿರುವುದನ್ನು ಸೇರ್ಪಡೆಗೆ ಅವಕಾಶ ನೀಡಿ ಸದ್ಯ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಜಾರಿಯಲ್ಲಿದೆ. ವಸತಿ ಯೋಜನೆಗಳು ಕೆಲವು ಹಂತದಲ್ಲಿ ನಿಂತು ಹೋಗಿದ್ದು, ಅದಕ್ಕೆ ಮತ್ತೆ ಅವಕಾಶ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


೯/೧೧ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿದಾಗ ವಿಧಾನಸಭೆಯಲ್ಲಿ ಚರ್ಚೆಯಾಗಿ ವಿಧಾನಸಭಾ ಅಧ್ಯಕ್ಷರು ಅಗತ್ಯ ವ್ಯವಸ್ಥೆಯನ್ನು ಮಾಡಿದ್ದಾರೆ. ಸದ್ಯ ನಗರಸಭೆಯ ತಾಲೂಕು ವ್ಯಾಪ್ತಿಗೆ ಬರುವ ಕೆಲಸವಾಗಿದೆಯಾದರೂ, ಇನ್ನೂ ಸರಳೀಕರಣವಾಗಿ ಪಂಚಾಯಿತಿ ವ್ಯಾಪ್ತಿಗೆ ಬರಬೇಕೆಂಬ ಬೇಡಿಕೆ ಜನರಿಂದ ಇದೆ. ಉಡುಪಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಾನ್ಯವಾದ ಮೂರು ಮಂದಿ ಆರ್ಕಿಟೆಕ್ಟ್‌ಗಳು ನಕ್ಷೆ ಮಾಡಿ ಅದಕ್ಕೆ ಅಪ್ರೂವಲ್ ಪಡೆದರೆ, ೨೫ ಸೆಂಟ್ಸ್ ಗ್ರಾಮ ಪಂಚಾಯಿತಿ ಹಾಗೂ ೧ ಎಕರೆವರೆಗೆ ತಾಲೂಕು ಪಂಚಾಯಿತಿಗೆ ಹೋಗುವ ವ್ಯವಸ್ಥೆಯಿತ್ತು. ಸರ್ಕಾರ ಈ ಬಗ್ಗೆ ಪುನರ್ ವಿಮಶೆ ಮಾಡಿ ಅದೇ ಮಾದರಿಯನ್ನು ಅಳವಡಿಸಿಕೊಂಡರೆ ಜನರಿಗೆ ಸುಲಭವಾಗಲಿದೆ ಎಂದು ತಿಳಿಸಿದರು.


ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಾಣೆಮಂಗಳೂರು ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂದೇಶ್, ವಿಟ್ಲ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಹಸೈನಾರ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.

ಪಂಚಾಯಿತಿ ಅಧ್ಯಕ್ಷ, ಸದಸ್ಯರಿಗೆ ಪ್ರಾಬ್ಲಂ
ಹಣಕಾಸಿನ ದುರುಪಯೋಗವಾದರೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಹೊಣೆಗಾರರು ಎಂಬ ಆದೇಶ ಮಾಡಿದ್ದು, ಇದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಗೊಂದಲವಿದೆ. ಸದ್ಯದ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶಿಕ್ಷಣದ ಮಿತಿ ಇರುವುದಿಲ್ಲ. ಹೆಚ್ಚಿನವರಿಗೆ ಕಂಪ್ಯೂಟರ್ ಜ್ಞಾನವಿರುವುದಿಲ್ಲ. ಅಽಕಾರಿಗಳು ತಯಾರಿಸಿದ ದಾಖಲೆಗಳಿಗೆ ಥಂಬ್ ನೀಡುವ ಕೆಲಸವನ್ನು ಅಧ್ಯಕ್ಷರು ಮಾಡಬೇಕಾಗಿದೆ. ಸದಸ್ಯರು ಯಾವುದೇ ಪಾವತಿ ವ್ಯವಹಾರದಲ್ಲಿ ಭಾಗಿಗಳಾಗಿರುವುದಿಲ್ಲ. ಹೀಗಿರುವಾಗ ಅವರನ್ನು ಹೊಣೆ ಮಾಡುವುದರಿಂದ ನಿರಪರಾಧಿಗಳು ಅಪರಾಽಗಳಾಗುವ ಸಾಧ್ಯತೆ ಇದ್ದು, ನಡಾವಳಿಯನ್ನು ಪರಿಶೀಲಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net