

ಉಡುಪಿ: ಡಾ. ಪಳ್ಳತ್ತಡ್ಕ ಕೇಶವ್ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ವತಿಯಿಂದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಣಿಪಾಲದ ಮಂಚಿ ಗ್ರೀನ್ ವ್ಯಾಲಿ ಪ್ಯಾಲೇಸ್ ರಿಟೈರ್‌ಮೆಂಟ್ ಹೋಮ್‌ನಲ್ಲಿ ಇತ್ತೀಚೆಗೆ ಹಿರಿಯರಿಗಾಗಿ ಪಂಚವೀಣಾ ಸಂಧ್ಯಾ ವಾದನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ಮಹಿಳೆ ಎಸ್.ಎನ್. ಕಮಲಾ ಕಾರ್ಯಕ್ರಮ ಉದ್ಘಾಟಿಸಿದರು. ಮಣಿಪಾಲದ ವಿಪಂಚಿ ಬಳಗದ ನಿರ್ದೇಶಕಿ ವಿದುಷಿ ಪವನಾ ಬಿ. ಆಚಾರ್ ಅವರು ಹಿರಿಯರಿಗೆ ಆರೋಗ್ಯಕರ ಚಟುವಟಿಕೆ ನಡೆಸಿದರು. ಬಳಿಕ ಅವರ ನೇತೃತ್ವದಲ್ಲಿ ವಿಪಂಚಿ ಬಳಗದ ಸದಸ್ಯರಾದ ವೀಣಾ ಉಪಾಧ್ಯಾಯ, ಶಶಿಕಲಾ ಭಟ್, ಶಿಲ್ಪಾ ಜೋಶಿ ಹಾಗೂ ಪ್ರಿಯದರ್ಶಿನಿ ಅವರು ಪಂಚವೀಣಾ ವಾದನ ನಡೆಸಿದರು.
ಸಹವಾದನ ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್, ತಾಳದಲ್ಲಿ ಧೃತಿ ರಾವ್ ಸಹಕರಿಸಿದರು. ಟ್ರಸ್ಟಿಗಳಾ ಡಾ. ತಾರಾ ಶ್ಯಾನುಭೋಗ್, ಡಾ. ಇಂದಿರಾ ಶ್ಯಾನುಭೋಗ್ ಉಪಸ್ಥಿತರಿದ್ದರು. ಕಲಾ ಸ್ಪಂದನ ಶಾಲೆಯ 30ನೇ ವರ್ಷದ ಸರಣಿ ಕಾರ್ಯಕ್ರಮ ಇದಾಗಿತ್ತು.