ವಿದ್ಯಾರ್ಥಿಗಳಿಗೆ ಪಂಚತಂತ್ರದ ಕಥೆ ಹೇಳುವ ಸ್ಪರ್ಧೆ

panchatantra
Published on

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಎಬಿಎಸ್‌ಪಿ) ಬೆಂಗಳೂರು ಮಹಾನಗರ ಘಟಕವು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಕನ್ನಡದಲ್ಲಿ ಪಂಚತಂತ್ರ ಕಥೆ ಹೇಳುವ ಸ್ಪರ್ಧೆ’ಯನ್ನು ಏರ್ಪಡಿಸಿದೆ.

ಮನೆಯಲ್ಲೇ ಕುಳಿತು ಕಥೆ ಹೇಳಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಆಯೋಜಕರಿಗೆ ಕಳುಹಿಸಬೇಕು. ಕಥೆ ಹೇಳುವ ಅವಧಿ 2-5 ನಿಮಿಷ. ಪಂಚತಂತ್ರದ 5 ತಂತ್ರಗಳಲ್ಲಿ ಯಾವುದಾದರೂ ಒಂದು ತಂತ್ರದ ಯಾವುದೇ ಒಂದು ಕಥೆ, ಕಥೆಯ ಭಾಗವಾಗಿ ನೀತಿಯನ್ನು ಉಲ್ಲೇಖಿಸುವುದು ಕಡ್ಡಾಯ. 8ರಿಂದ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ತರಗತಿವಾರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ. ಕಥೆಯ ವಿಡಿಯೋ ತಲುಪಿಸಲು ಆ.31 ಕಡೆಯ ದಿನವಾಗಿರುತ್ತದೆ ಎಂದು ಎಬಿಎಸ್‌ಪಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net