ಇಂದಿನಿಂದ ಪಂಚರಾತ್ರೋತ್ಸವ ಸಂಭ್ರಮ

Pancharatrotsava celebration from today
ನಂಜನಗೂಡು ಮಠ
Published on

ವಿಜಯಪುರ: ಇಲ್ಲಿನ ಬಾಗಲಕೋಟೆ ರಸ್ತೆಯ ಕೋರ್ಟ್​ ಮುಂಭಾಗದ ನಂಜನಗೂಡು ರಾಯರ ಮಠದಲ್ಲಿ ಆ. 20, 21 ಮತ್ತು 22 ರಂದು ಶ್ರೀ ರಾವೇಂದ್ರ ಗುರು ಸಾರ್ವ ಭೌಮರ 353 ನೇ ಆರಾಧನೆ ಪ್ರಯುಕ್ತ ಪಂಚರಾತ್ರೋತ್ಸವ ಸಂಭ್ರಮದಿಂದ ನಡೆಯಲಿದೆ.

ಶ್ರೀ ಮಠದಲ್ಲಿ ಆ. 20 ರಿಂದ ಮೂರು ದಿನ ಗುರುಸಾರ್ವಭೌಮರ ಆರಾಧನೆ ಹಿನ್ನೆಲೆಯಲ್ಲಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಅಷ್ಟೋತ್ತರ ಸಹಿತ 108 ಲೀಟರ್​ ಹಾಲಿನಿಂದ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ ಪಾದ ಪೂಜಾ, ಅರ್ಚನೆ, ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ, ಬ್ರಾಹ್ಮಣರ ಅನ್ನ ಸಂತರ್ಪಣೆ, ತೀರ್ಥ ಪ್ರಸಾದ ಮತ್ತು ಸಂಜೆ ಭಜನೆ, ದಾಸವಾಣಿ ದೀವಟಗಿ, ಮಂಗಳಾರತಿ, ರಥೋತ್ಸವ ಸ್ವಸ್ತಿವಾಚನ ಹಾಗೂ ಮಹಾ ಮಂಗಳಾರತಿ ಜರುಗಲಿವೆ.

22 ರಂದು ಬೆಳಗ್ಗೆ 9 ಕ್ಕೆ ಉತ್ತರಾರಾಧನೆ ಪ್ರಯುಕ್ತ ಗುರುಸಾರ್ವಭೌಮರ ರಥೋತ್ಸವ ನಡೆಯಲಿದೆ. ಅಲ್ಲದೆ, ಪ್ರತಿದಿನ ಸಂಜೆ ವಿವಿಧ ಗಾಯಕರು ಸಂಗೀತ ಸೇವೆ ಸಲ್ಲಿಸಲಿದ್ದಾರೆ.

23ರಂದು ಶ್ರೀ ಸುಜ್ಞಾನೇಂದ್ರತಿರ್ಥರ ಅರಾಧನೆ ಅಂಗವಾಗಿ ಅಷ್ಟೋತ್ತರ ಸಹಿತ ಫಲ, 108 ಲೀಟರ್​ ಹಾಲಿನಿಂದ ಪಂಚಾಮೃತ ಅಭಿಷೇಕ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 7760308495 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net